Latest

ಬೀದಿ ನಾಯಿ ಕಚ್ಚಿದ್ದಕ್ಕೆ ಲಸಿಕೆ ಪಡೆದರೂ ಬದುಕುಳಿಯದ ವಿದ್ಯಾರ್ಥಿನಿ

ಪ್ರಗತಿ ವಾಹಿನಿ ಸುದ್ದಿ, ಕಾಸರಗೋಡು: ಬೀದಿ ನಾಯಿ ಕಚ್ಚಿದ್ದಕ್ಕೆ ಲಸಿಕೆ ಪಡೆದರೂ ಫಲಕಾರಿಯಾಗದೆ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ.

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ಈ ಘಟನೆ ನಡೆದಿದೆ. ಶ್ರೀಲಕ್ಷ್ಮೀ (19) ಎಂಬ ಯುವತಿ ಮೃತಪಟ್ಟವಳು. ಈಕೆಗೆ ಮೇ 30ರಂದು ಬೀದಿ ನಾಯಿ ಕಚ್ಚಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ಪಡೆದಿದ್ದ ಯುವತಿ ವೈದ್ಯರ ಸಲಹೆಯಂತೆ ರೆಬಿಸ್ ಲಸಿಕೆ ಪಡೆದಿದ್ದಳೆನ್ನಲಾಗಿದೆ.

Home add -Advt

ಆದಾಗ್ಯೂ ನಂತರದಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಶೂರ್ ನ ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಈ ಘಟನೆ ಕುರಿತು ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಲ್ಲಿನ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

ವ್ಯಕ್ತಿ ಶಿರಚ್ಛೇದನ ಪ್ರಕರಣ; ಮತ್ತೆ ಮೂವರ ಬಂಧನ

Related Articles

Back to top button