Latest

ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರ‍ೇಡ್ ಮಾರ್ಕ್

ಪ್ರಗತಿವಾಹಿನಿ ಸುದ್ದಿ; ಉಡುಪಿ: ಉಡುಪಿ ಹೋಟೆಲ್ ಇಡ್ಲಿ-ಸಾಂಬಾರ್ ಎಂದರೆ ಎಲ್ಲರ ಬಾಯಲ್ಲೂ ನೀರೂರತ್ತೆ. ಇದೀಗ ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರೇಡ್ ಮಾರ್ಕ್ ಪಡೆಯಲಾಗಿದೆ.

ಹೌದು ಉಡುಪಿಯ ಇಡ್ಲಿ-ಸಾಂಬಾರ್ ಗೆ ದೂರದ ಅಮೆರಿಕಾದಲ್ಲಿ ಬ್ರ್ಯಾಂಡ್, ಟ್ರೇಡ್ ಮಾರ್ಕ್ ಗೌರವ ಲಭ್ಯವಾಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್ ನವರು ಉಡುಪಿ ಇಡ್ಲಿಗೆ ಟ್ರೇಡ್ ಮಾರ್ಕ್ ಪಡೆದುಕೊಂಡಿದ್ದು, ಆನ್ ಲೈನ್ ಮೂಲಕ ವ್ಯವಹಾರ ಆರಂಭವಾಗಿದೆ.

6 ಇಡ್ಲಿಗೆ 1.99 ಡಾಲರ್ (150 ರೂ.), 24 ಇಡ್ಲಿಗಳ ಫ್ಯಾಮಿಲಿ ಪ್ಯಾಕ್ ಗೆ 4.99 ಡಾಲರ್ (375 ರೂ) ದರ ನಿಗದಿ ಪಡಿಸಲಾಗಿದ್ದು, ಅಮೆರಿಕಾದಲ್ಲಿ ಹಾಟ್ ಕೇಕ್ ನಂತೆ ಉಡುಪಿ ಇಡ್ಲಿ ಮಾರಾಟವಾಗುತ್ತಿದೆ.

ಇದೀಗ ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಬ್ರ್ಯಾಂಡ್, ಟ್ರೇಡ್ ಮಾರ್ಕ್ ಪಡೆದಿರುವುದರಿಂದ ಉಡುಪಿ ಇಡ್ಲಿ ಹೆಸರಲ್ಲಿ ಬೇರೆಯವರು ಟ್ರ‍ೇಡ್ ಮಾರ್ಕ್ ಪಡೆಯುವಂತಿಲ್ಲ. ಹೀಗಾಗಿ ಉಡುಪಿ ಮೂಲದ ಉತ್ಪನ್ನಗಳಿಗೆ ಬ್ರ್ಯಾಂಡ್, ಟ್ರೇಡ್ ಮಾರ್ಕ್ ಪದೆದುಕೊಳ್ಳಲು, ರಫ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ವಿಚ್ಛೇದನ ಘೋಷಿಸಿದ ಸಮಂತಾ-ನಾಗಚೈತನ್ಯ

ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ; ಬಾರಪ್ಪ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ವಿಜಯೇಂದ್ರಗೂ ಸೂಚಿಸಿದ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button