Karnataka NewsLatest

*ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಹೊಡೆದು ನೃತ್ಯ ಮಾಡಿ ಅಟ್ಟಹಾಸ ಮೆರೆದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಯ ಕತ್ತನ್ನು ಕತ್ತಿಯಿಂದ ಕಡಿದು ಕುಣಿದು ಕುಪ್ಪಳಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.

ಲಕ್ಷ್ಮಣ ಎಂಬಾತ ಕಂಠಪೂರ್ತಿ ಕುಡಿದು ಬಂದು ಕತ್ತಿಯಿಂದ ಪತ್ನಿ ಅನಿತಾ ಕತ್ತಿಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಪತ್ನಿಯನ್ನು ರೂಮಿನಲ್ಲಿ ಕೂಡಿ ಹಾಕಿ ಬಳಿಕ ಮನೆಯ ಹಾಲ್ ಗೆ ಬಂದು ಕತ್ತಿ ಹಿಡಿದು ನೃತ್ಯಮಾಡಿ ಅಟ್ಟಹಾಸ ಮೆರೆದಿದ್ದಾನೆ.

Home add -Advt

ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರೂಮಿನಿಂದ ಹೊರತರಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಮಹಿಳೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಪತಿಯನ್ನು ಬಂಧಿಸಲಾಗಿದೆ.

ಸೊರಬ ಮೂಲದ ದಂಪತಿ ಲಕ್ಷ್ಮಣ ಹಾಗೂ ಅನಿತಾ ಬಸ್ರೂರು ಕಾಶಿ ಮಠ, ರೆಸಿಡೆನ್ಸಿಯಲ್ ಬ್ಲಾಕ್ ನ ಮನೆಯಲ್ಲಿ ಬಾಡಿಗೆಗೆ ಇದ್ದರು. ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಿನ್ನೆ ತಡರಾತ್ರಿ ಲಕ್ಷ್ಮಣ ಕುಡಿದು ಬಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೈಯಲ್ಲಿ ಕತ್ತಿ ಹಿಡಿದು ಮೈಮೇಲೆ ದೈವ ಬಂದವರಂತೆ ಕುಣಿದಾಡಿ ಅಟ್ಟಹಾಸ ಮೆರೆದಿದ್ದಾನೆ.

Related Articles

Back to top button