Karnataka NewsLatest

*ಉಡುಪಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೇರಳದಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಉಡುಪಿಯ ಕೋಚಿಂಗ್ ಸೆಂಟರ್ ನಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕ ಕೇರಳದ ಪಾಲಕ್ಕಾಡ್ ನಲ್ಲಿ ಪತ್ತೆಯಾಗಿದ್ದಾನೆ.

8ನೇ ತರಗತಿ ವಿದ್ಯಾರ್ಥಿ ಆರ್ಯನನ್ನು ಸೆ.8ರಂದು ಆತನ ತಂದೆ ಪ್ರಕಾಶ್ ಶೆಟ್ಟಿ ಉಡುಪಿಯ ಕೋಚಿಂಗ್ ಇನ್ಸ್ ಸ್ಟಿಟ್ಯೂಟ್ ಗೆ ಡ್ರಾಪ್ ಮಾಡಿದ್ದರು. ಆದರೆ ಮಧ್ಯಾಹ್ನ 2:45ಕ್ಕೆ ಆತನನ್ನು ಕರೆದುಕೊಂಡು ಹೋಗಲೆಂದು ಕೋಚಿಂಗ್ ಸೆಂಟರ್ ಬಳಿ ಬಂದಾಗ ವಿದ್ಯಾರ್ಥಿ ಇರಲಿಲ್ಲ. ಏಕಾಏಕಿ ನಾಪತ್ತೆಯಾಗಿದ್ದ. ಕೋಚಿಂಗ್ ಸೆಂಟರ್ ನಲ್ಲಿ ವಿಚಾರಿಸಿದರೆ ಅಂದು ಆರ್ಯ ಕೋಚಿಂಗ್ ಸೆಂಟರ್ ಗೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ. ಕಂಗಾಲಾದ ಪೋಷಕರು ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರಿಗೆ ಬಾಲಕ ಆರ್ಯ, ಏಕಾಂಗಿಯಾಗಿ ಉಡುಪಿಯಿಂದ ಕೇರಳದ ಪಾಲಕ್ಕಾಡ್ ಗೆ ರೈಲಿನಲ್ಲಿ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಬಾಲಕ ಪಾಲಕ್ಕಾಡ್ ನಲ್ಲಿ ಪತ್ತೆಯಾಗಿದ್ದು, ಆತನನ್ನು ಉಡುಪಿಗೆ ಕರೆತರಲಾಗುತ್ತಿದೆ.

Home add -Advt

Related Articles

Back to top button