ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಷ್ಯಾ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಏರ್ ಲಿಫ್ಟ್ ಕಾರ್ಯ ಬರದಿಂದ ಸಾಗಿದ್ದು, ಈ ನಡುವೆ ಬೆಳಗಾವಿ ಜಿಲ್ಲೆಯ 7 ವಿದ್ಯಾರ್ಥಿಗಳು ಇನ್ನೂ ಉಕ್ರೇನ್ ನಲ್ಲಿಯೇ ಸಿಲುಕಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ 7 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಂಕಷ್ಟಕ್ಕೀಡಾಗಿದ್ದು, ತಮ್ಮನ್ನು ತಕ್ಷಣ ರಕ್ಷಣೆ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಥಣಿ ತಾಲೂಕಿನ ಐವರು, ರಾಯಭಾಗ, ನಿಪ್ಪಾಣಿ ತಾಲೂಕಿನ ತಲಾ ಒಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿದ್ದಾರೆ. ಹಾಸ್ಟೇಲ್ ಬಂಕರ್ ನಲ್ಲಿ ಈ ವಿದ್ಯಾರ್ಥಿಗಳು ಊಟ, ನೀರಿಗಾಗಿಯೂ ಪರದಾಡುವ ಸ್ಥಿತಿ ಎದುರಾಗಿದೆ.
ಅಥಣಿ ತಾಲ್ಲೂಕಿನ ಮಲಾಬಾದ ಗ್ರಾಮದ ಆನಂದ ನಾಜರೆ, ಅಥಣಿ ಪಟ್ಟಣದ ಆಪರೀನಾ ನೀಡೋಣಿ ಹಾಗೂ ರಕ್ಷೀತ್ ಗಣಿ. ತೇಲಸಂಗ್ ಗ್ರಾಮದ ನಾಗೇಶ್ ಪೂಜಾರಿ ಹಾಗೂ ರಾಕೇಶ್ ಪೂಜಾರಿ, ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ಪ್ರೀಯಾ ನಿಡಗುಂದಿ, ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಸೂರಜ್ ಬಾಗೋಜಿ ಎಂಬ ವಿದ್ಯಾರ್ಥಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಕಾಯುತ್ತಿದ್ದಾರೆ.
ಉಕ್ರೇನ್ ನಲ್ಲಿ ಬೆಳಗಾವಿಯ ಮತ್ತೊಬ್ಬ ವಿದ್ಯಾರ್ಥಿ: ಬೆಳಗ್ಗೆಯಿಂದ ಕರೆ ಸ್ವೀಕರಿಸುತ್ತಿಲ್ಲ, ಪಾಲಕರ ಆತಂಕ
ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ