
ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ಯುದ್ಧವನ್ನು ರಷ್ಯಾ ಸೇನೆ ಮತ್ತಷ್ಟು ತೀವ್ರಗೊಳಿಸಿದ್ದು, ಅಣು ವಿದ್ಯುತ್ ಸ್ಥಾವರ, ತೈಲ ಘಟಕಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಜೀವ ಉಳಿಸಿಕೊಳ್ಳಲು ಜನರು ದಿಕ್ಕಾಪಾಗಿ ಓಡುತ್ತಿದ್ದಾರೆ.
ತೈಲ ಘಟಕ ಗುರಿಯಾಗಿಸಿಕೊಂಡು ರಷ್ಯಾ ಸೇನೆ ಲುಹಾನ್ಸಕ್ ನಲ್ಲಿ ದಾಳಿ ನಡೆಸಿದ್ದು, ಭಾರಿ ಸ್ಫೋಟ ಸಂಭವಿಸಿದೆ. ತೈಲ ಘಟಕ ಮುಗಿಲೆತ್ತರಕ್ಕೆ ಧಗ ಧಗನೆ ಹೊತ್ತಿ ಉರಿದಿದೆ.
ಮತ್ತೊಂದೆಡೆ ಉಕ್ರೇನ್ ರಾಜಧಾನಿ ಕೀವ್ ಹೊರವಲಯಗಳಲ್ಲಿ ಭೀಕರ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಜಿವ ಉಳಿಸಿಕೊಳ್ಳಲು ಜನರು ದಿಕ್ಕಾಪಾಗಿ ಓಡಿದ್ದಾರೆ. ಉಕ್ರೇನ್ ನ ಒಡೆಶಾದ ತುಝ್ಲಾ ಗ್ರಾಮದ ಮೇಲೆ ಕೂಡ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಗ್ರಾಮದ ಜನರು ಕಂಗಾಲಾಗಿದ್ದಾರೆ.
ಉಕ್ರೇನ್ ನಲ್ಲಿ ರಕ್ತ, ಕಣ್ಣೀರ ನದಿ ಹರಿಯುತ್ತಿದೆ; ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿದ ಪೋಪ್ ಫ್ರಾನ್ಸಿಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ