ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ವಿರುದ್ಧ ಸಮರ ಮುಂದುವರೆಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯನ್ನು ತೀವ್ರವಾಗಿ ಖಂಡಿಸಿರುವ ಟೇಕ್ವಾಂಡೋ ಸಂಸ್ಥೆ ಪುಟಿನ್ ಗೆ ನೀಡಲಾಗಿದ್ದ ಗೌರವ ಪದವಿ ರದ್ದುಗೊಳಿಸಿದೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಜಗತ್ತಿನ ರಾಷ್ಟ್ರಗಳು ಖಂಡಿಸಿವೆ. ರಷ್ಯಾ ಧೋರಣೆಯನ್ನು ವಿಶ್ವ ಸಂಸ್ಥೆ ಕೂಡ ಖಂಡಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಹಟಮಾರಿ ನಿಲುವಿಗೆ ಸ್ವತ; ರಷ್ಯನ್ ಪ್ರಜೆಗಳೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ ಸಮರ ಮುಂದುವರೆಸಿರುವ ಪುಟಿನ್ ಗೆ ಇದೀಗ ಆಘಾತ ಎದುರಾಗಿದೆ. ವಿಶ್ವ ಟೇಕ್ವಾಂಡೋ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದ್ದ ಬ್ಲಾಕ್ ಬೆಲ್ಟ್ ಗೌರವವನ್ನು ರದ್ದುಗೊಳಿಸಿದೆ.
ತಾನು ನೀಡಿದ್ದ ಗೌರವ ಹಿಂಪಡೆದಿರುವ ಸಂಸ್ಥೆ ವಿಜಯಕ್ಕಿಂತ ಶಾಂತಿಯೇ ಮುಖ್ಯ. ಮುಗ್ದ ಜೀವಗಳ ಮೇಲಿನ ಕ್ರೂರ ದಾಳಿ ಸರಿಯಲ್ಲ. ಇದು ಕ್ರೀಡೆಯ ಗೌರವ ಮತ್ತ್ತು ಸಹಿಷ್ಣುತೆಯ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದು ಸಂದೇಶ ರವಾನಿಸಿದೆ.
ಈ ಮೂಲಕ ಪುಟಿನ್ ಅವರಿಗೆ ನೀಡಲಾಗಿದ್ದ ಗೌರವ 9ನೇ ಬ್ಲಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ.
ಈ ನಡುವೆ ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಗೆ ಸದಸ್ಯತ್ವ ನೀಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಫ್ರಾನ್ಸ್ ಶಾಶ್ವತ ಪ್ರತಿನಿಧಿ ಲೆಗ್ಲಿಸ್ ಕೋಸ್ಟಾ ಅವರಿಗೆ ಹಸ್ತಾಂತರಿಸಲಾಗಿದೆ. ಉಕ್ರೇನ್ ಗೆ ಯುರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
World Taekwondo strongly condemns the brutal attacks on innocent lives in Ukraine, which go against the World Taekwondo vision of “Peace is More Precious than Triumph” and the World Taekwondo values of respect and tolerance.#PeaceIsMorePreciousThanTriumphhttps://t.co/nVTdxDdl2I
— World Taekwondo (@worldtaekwondo) February 28, 2022
ರಷ್ಯಾ ಅಧ್ಯಕ್ಷ ಪುಟಿನ್ ಗೆ ಮತ್ತೊಂದು ಶಾಕ್; ಬ್ಲಾಕ್ ಬೆಲ್ಟ್ ಗೌರವ ಹಿಂಪಡೆದ ಟೇಕ್ವಾಂಡೋ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ನಿಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ