ಪ್ರಗತಿ ವಾಹಿನಿ ಸುದ್ದಿ, ಮುಂಬೈ –
ಪ್ರಸಕ್ತ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ಅತೀ ವೇಗದ ಬಾಲ್ ಎಸೆದು ದಾಖಲೆ ಬರೆದಿದ್ದಾರೆ.
ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಎಸೆದ ಒಂದು ಬಾಲ್ ಗಂಟೆಗೆ ೧೫೪ ಕಿಮೀ ವೇಗದಲ್ಲಿತ್ತು. ರೆಪ್ಪೆ ಮಿಟುಕಿಸುವುದರ ಒಳಗೆ ಮಿಂಚಿನ ವೇಗದಲ್ಲಿ ಹಾದು ಹೋದ ಈ ಬಾಲ್ ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಬಾಲ್ ಎಂದು ದಾಖಲೆ ಬರೆದಿದೆ.
ಈ ಮೂಲಕ ಅವರು ಇದುವರೆಗೆ ಗುಜರಾತ್ ಟೈಟಾನ್ಸ್‌ನ ವೇಗಿ ಲೂಕಿ ಫರ್ಗೂಸನ್ ಹೆಸರಲ್ಲಿದ್ದ ಅತೀ ವೇಗದ ಬಾಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಲೂಕಿ ಫರ್ಗೂಸನ್ ೧೫೩.೯ ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು.
ಸೋಲಿನ ಭೀತಿಗೆ ಕಂಗೆಟ್ಟು ಧೋನಿಗೆ ಸಿಎಸ್‌ಕೆ ನಾಕತ್ವ ಒಪ್ಪಿಸಿದ ರವೀಂದ್ರ ಜಡೇಜಾ
ಡಾ.ರಾಜಶೇಖರ ಮಲ್ಲಿಕಾರ್ಜುನ ಮನಸೂರ ನಿಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ