Belagavi NewsBelgaum News

*ಅಪರಿಚಿತ ಮೃತ ದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಹಳೆ ವಂಟಮೂರಿ ಘಾಟದಲ್ಲಿ ಸೆ. 22 ರಂದು ಎಲ್. ಎಚ್, ಎಸ್. ಹತ್ತಿರ ಬೆಳಗಾವಿ ಕಡೆಯಿಂದ ಸಂಕೇಶ್ವರ ಕಡೆಗೆ ಹೋಗುವ ಹೈವೆ ರಸ್ತೆಯ ಬದಿಗೆ ವಾಹನ ಅಪಘಾತವಾಗಿ ಅಪರಿಚಿತ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವನ ತಲೆ ಜಜ್ಜಿದ್ದು ಮುಖ ಸ್ಪಷ್ಟವಾಗಿ ಗುರುತು ಸಿಗುತ್ತಿಲ್ಲ ಸದರಿ ಮೃತನ ವಯಸ್ಸು 45 ರಿಂದ 50 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಮೃತನ ವಿವರ: 5. 2 ಎತ್ತರ, ಗೋದಿ ಮೈಬಣ್ಣ ಕುತ್ತಿಗೆಯ ಬಲಬಾಜು ಓಂ ಅಂತಾ ಟ್ಯಾಟೊ ಇದ್ದು, ಹಳದಿ ಬಣ್ಣದ ಟಿ ಶರ್ಟ್, ತಿಳಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಸದರಿ ಅಪರಿಚಿತ ಮೃತದೇಹದ ಬಗ್ಗೆ ಮಾಹಿತಿ ದೊರೆತಲ್ಲಿ ಕಾಕತಿ ಪೊಲೀಸ್ ಠಾಣೆಯ ಪಿ.ಎಸ್ ದೂರವಾಣಿ. 08312405203, ಪಿಐ 9480804115 ಅಥವಾ ಪಿಎಸ್ಐ 9480804083 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಕಾಕತಿ ಪೊಲೀಸ್ ಠಾಣೆಯ ಪಿ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button