*ಕೇಂದ್ರದ ಬಜೆಟ್ ಪ್ರಗತಿಯ ವಾಹಕ: ಡಾ.ಪ್ರಭಾಕರ ಕೋರೆ*
ಪ್ರಗತಿವಾಹಿನಿ ಸುದ್ದಿ: ಕೇಂದ್ರದ ಬಜೆಟ್ ನಿಜವಾಗಿಯೂ ಆಶಾದಾಯಕವಾಗಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.
ಆಯುಷ್‍ಮಾನ್ ಭಾರತ ಅಡಿಯಲ್ಲಿ ಎಲ್ಲ ಆಶಾಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಆರೋಗ್ಯವಿಮೆಯನ್ನು ವಿಸ್ತರಿಸಿ ಇರುವುದು ಬಹುಮೌಲಿಕವೆನಿಸಿದೆ. ಅದರೊಂದಿಗೆ ಇಲೆಕ್ಟ್ರಿಕಲ್ ವಾಹನಗಳಿಗೆ ಉತ್ತೇಜನ ನೀಡಲಾಗಿದೆ.ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ.
ರಕ್ಷಣಾ, ಗ್ರಾಮೀಣಾಭಿವೃದ್ಧಿ, ಕೃಷಿ, ಸಹಕಾರಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡಿರುವುದು ಭವಿಷ್ಯತ್ತಿನಲ್ಲಿ ಭಾರತ ಮತ್ತಷ್ಟು ಪ್ರಕಾಶಿಸಲಿದೆ. ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡುತ್ತಿರುವುದು ಮಹತ್ವದ ನಿರ್ಧಾರವೆನಿಸಿದೆ. ಅದರೊಂದಿಗೆ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಅಭಿನಂದನೀಯ.
1 ಲಕ್ಷ ಕೋಟಿ ಸಂಶೋಧನೆಗೆ ಮೀಸಲಾಗಿಟ್ಟಿರುವುದು ಪ್ರಗತಿಯ ದಿಕ್ಸೂಚಿಯಾಗಿದೆ. ಒಟ್ಟಿನಲ್ಲಿ ಕೇಂದ್ರದ ಬಜೆಟ್ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ