*ನಾರಿಶಕ್ತಿಯ ಸ್ವಾವಲಂಬನೆಗೆ ʻಲಖ್‌ಪತಿ ದೀದಿʼಯೋಜನೆ ಸ್ವಾಗತಾರ್ಹ; ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್; ಶಾಸಕಿ ಶಶಿಕಲಾ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಭಾರತವನ್ನು ವಿಶ್ವ ಆರ್ಥಿಕತೆಯ ಅಗ್ರಸ್ಥಾನದತ್ತ ಕೊಂಡೊಯ್ಯಲಿದೆ ಎಂದು ಮಾಜಿ ಸಚಿವೆ, ಶಾಸಕಿ ಶಸಿಕಲಾ ಜೊಲ್ಲೆ ತಿಳಿಸಿದ್ದಾರೆ.
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಮಾದರಿಯಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಈ ಬಾರಿಯ ಮಧ್ಯಂತರ ಬಜೆಟ್ ಅನ್ನು ಸರ್ವವ್ಯಾಪಿ, ಸರ್ವಸ್ಪರ್ಶಿಯನ್ನಾಗಿಸಿದೆ ಎಂದಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಜೊತೆಗೆ ನಾರಿಶಕ್ತಿಯ ಸ್ವಾಭಿಮಾನದ ಸ್ವಾವಲಂಬನೆಗೆ ʻಲಖ್‌ಪತಿ ದೀದಿʼಯೋಜನೆ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ.ದೇಶದ ಮಹಿಳೆಯರ ಸ್ವಾವಲಂಬನೆ ಜೀವನ, ರೈತರ ಶ್ರೇಯೋಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ದೇಶದ ಆರ್ಥಿಕತೆಗೆ ಶಕ್ತಿ ನೀಡುವಲ್ಲಿ ಈ ಬಜೆಟ್ ಸಹಾಯಕವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ