ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಂದೇ ಸ್ಥಳದಲ್ಲಿ ಒಂದೇ ಸ್ವರದಲ್ಲಿ ಹಲವಾರು ಮಕ್ಕಳು ಶ್ಲೋಕ ಉಚ್ಚಾರಣೆ, ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ. ಹೃದಯ ಸ್ವಚ್ಛವಾಗುತ್ತದೆ. ಪವಿತ್ರ ವಾತಾವರಣ ನಿರ್ಮಾಣವಾದಾಂತಾಯಿತು ಎಂದು ಸೌಂದರ್ಯ ಲಹರಿಯ 11 ಶ್ಲೋಕಗಳ ಸಾಮೂಹಿಕ ಪಠಣ ಮಾಡಿದ ವಿದ್ಯಾರ್ಥಿಗಳ ಕಾರ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದರು.
ವೇದಾಂತ ಭಾರತಿ ಸಂಸ್ಥೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಾಹಿಸಿ ಮಾತನಾಡಿದ ಅಮಿತ್ ಶಾ, ವೇದ ಉಪನಿಷತ್ತು ಮಕ್ಕಳ ಬಾಳಿಗೆ ದೀಪವಾಗಿದೆ. ಶಿಕ್ಷಣದ ಜೊತೆ ವೇದ ಉಪನಿಷತ್ತು ಅಗತ್ಯ. ವೇದಾಂತ ಭಾರತಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವೇದಾಂತ ಭಾರತಿಯ ಈ ಅನನ್ಯ ಕಾರ್ಯಕ್ಕೆ ನನ್ನ ನಮನಗಳು ಎಂದರು.
ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲೀಕಾವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು 23 ಭಾಷೆಗಳಿಗೆ ಭಾಷಾಂತರಿಸಿ ರಾಷ್ಟ್ರದ ಮೂಲೆ ಮೂಲೆಗಳಿಗೆ ವಿತರಿಸುವ ಕೆಲಸ ಮಾಡಿದ್ದಾರೆ. ನವ ಭಾರತ ಕಟ್ಟಲು ವೇದಾಂತ ಭಾರತಿ ಶ್ರಮಿಸುತ್ತಿದೆ. ರತ್ನಮಾಲಿಕೆ ಮಕ್ಕಳಿಗೆಲ್ಲಾ ಪ್ರೇರಣೆಯಾಗಿದೆಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ