Belagavi NewsBelgaum NewsKannada NewsKarnataka News

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಡಾ.ಪ್ರಭಾಕರ ಕೋರೆ ಸತ್ಕಾರ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಗವಾಡ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುರಗುಂಡಿ (ಕಾಗವಾಡ)ದಿಂದ ಗೋಟೂರ ವರೆಗಿನ ಚತುಸ್ಪಥ ರಸ್ತೆಯ ಕಾಮಗಾರಿಗೆ ೨೬೧೫ ಕೋಟಿ ರೂಪಾಯಿಗಳನ್ನು ಕೇಂದ್ರದಿಂದ ಮಂಜೂರು ಮಾಡಿ ಅದರಂತೆ ಶಿರಗುಪ್ಪಿಯಿಂದ ಅಂಕಲಿಯ ಕೃಷ್ಣಾ ಮೇಲ್ಸೇತುವೆ ಕಾಮಗಾರಿಗೂ ಅದೇ ಮಂಜೂರಾತಿಯಲ್ಲಿ ೮೮೭ ಕೋಟಿ ಹಣವನ್ನು ಮೀಸಲಿಟ್ಟು ಚಾಲನೆ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಮಸ್ತ ಚಿಕ್ಕೋಡಿ ಕಾಗವಾಡ ಭಾಗದ ಜನತೆಯ ಪರಿವಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಬೆಳಗಾವಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಅಂತೆಯೆ ಬೆಳಗಾವಿ ನಗರದ ರಿಂಗ್ ರಸ್ತೆ ಕಾಮಗಾರಿಯು ಬಹುವರ್ಷಗಳಿಂದ ನೆನಗುದಿಗೆ ಬಿದ್ದಿತ್ತು ಅದಕ್ಕೆ ೧೬೨೨ ಕೋಟಿ ರೂ.ಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಜೂರು ಮಾಡಿದ್ದಾರೆ ಎಂದು ಸ್ಮರಿಸಿದ ಡಾ.ಕೋರೆಯವರು, ಕಾಗವಾಡದಿಂದ ಮೀರಜ್(ಮಹಾರಾಷ್ಟ್ರ) ಸಂಪರ್ಕ ಕಲ್ಪಿಸುವ ಸುಮಾರು ೧೭ ಕಿ.ಮೀ.ರಸ್ತೆಯನ್ನು ಉನ್ನತದರ್ಜೆಗೆ ಏರಿಸಬೇಕು ಈ ರಸ್ತೆಯು ಮುಂದೆ ಸೊಲ್ಲಾಪುರ-ಲಾತೂರ-ನಾಗಪೂರಕ್ಕೆ ಹೋಗಲು ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂದು ವಿನಂತಿಸಿಕೊಂಡಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button