Politics

*ಗ್ಯಾರಂಟಿ ಯೋಜನೆಗಳಿಗೆ ಫುಲ್ ಮಾರ್ಕ್ಸ್ ನೀಡಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ*

ಪ್ರಗತಿವಾಹಿನಿ ಸುದ್ದಿ:  ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಫುಲ್ ಮಾರ್ಕ್ಸ್ ನೀಡಿ ಹಾಡಿ ಹೊಗಳಿದ್ದಾರೆ.‌

ಆರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಎಲ್ಲವೂ ಸರಿಯಾಗಿದ್ದು ಅಭಿವೃದ್ಧಿ ಕಾರ್ಯದ ಜತೆಗೆ ಗ್ಯಾರಂಟಿಗಳು ಜನರ ಕ್ಷೇಮಾಭಿವೃದ್ಧಿಗೆ ಸಹಾಯ ಮಾಡಿದೆ. ಬಿಜೆಪಿಯಲ್ಲಿ ಆಂತರಿಕ ಕಲಹ ಹೆಚ್ಚಾಗುತ್ತಿದೆ. ಹೀಗಾಗಿಯೇ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದೇನೆ. ವಿಜಯೇಂದ್ರ ಹಾಗೂ ಯತ್ನಾಳ್ ನಡುವಿನ ಮುಸುಕಿನ ಗುದ್ದಾಟ ಮುಜುಗರ ತಂದಿದೆ. ಬಿಜೆಪಿಯ ಗೊಂದಲದ ಬಗ್ಗೆ ನಾವು ಮಾತಾಡಿದಾಗ ಎಲ್ಲರೂ ವಿರೋಧಿಸಿದರು. ಈಗ ಎಲ್ಲವೂ ಜಗಜ್ಜಾಹೀರಾಗಿದೆ. ಸದ್ಯಕ್ಕೆ ಕಾಂಟ್ರವರ್ಸಿಗಳಿಂದ ದೂರು ಉಳಿದು ಕ್ಷೇತ್ರದ ಅಭಿವೃದ್ಧಿ ಬಗ್ಗೆಯಷ್ಟೇ ಗಮನ ಕೊಡುತ್ತಿರೋದಾಗಿ ಹೇಳಿದರು.

Home add -Advt

Related Articles

Back to top button