
ಪ್ರಗತಿವಾಹಿನಿ ಸುದ್ದಿ, ಅಂಕಾರಾ: ರಷ್ಯಾ-ಉಕ್ರೇನ್ ಯುದ್ಧ ಒಂದು ವರ್ಷ ಪೂರೈಸಿದೆ. ಆದರೆ ಉಭಯ ರಾಷ್ಟ್ರಗಳ ದಾಳಿ- ಪ್ರತಿದಾಳಿಯ ಯುದ್ಧ ತಂತ್ರಗಳು ಮುಂದುವರಿದೇ ಇವೆ. ಏತನ್ಮಧ್ಯೆ ಜಗತ್ತಿನ ನಾನಾ ರಾಷ್ಟ್ರಗಳು ಶಾಂತಿಮಂತ್ರ ಮೊಳಗುತ್ತಿದ್ದು ಇದೀಗ ಟರ್ಕಿ ಶಾಂತಿ ಮಾತುಕತೆಗೆ ನೆರವಾಗುವುದಾಗಿ ಘೋಷಿಸಿದೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಕ್ರಮವಾಗಿ ರಷ್ಯನ್ ಮತ್ತು ಉಕ್ರೇನಿಯನ್ ಅಧ್ಯಕ್ಷರೊಂದಿಗೆ ಫೋನ್ ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ ಕದನ ವಿರಾಮ ಮತ್ತು ಶಾಂತಿ ಮಾತುಕತೆಗಳಿಗೆ ಯಾವುದೇ ನೆರವು ನೀಡಲು ಸಿದ್ಧ ಎಂದಿದ್ದಾರೆ.
ಪುಟಿನ್ ಅವರೊಂದಿಗಿನ ಫೋನ್ ಸಂಭಾಷಣೆಯಲ್ಲಿ, ಇಸ್ತಾಂಬುಲ್‌ನಲ್ಲಿ ತಲುಪಿದ ಧಾನ್ಯ ಒಪ್ಪಂದದ ವಿಸ್ತರಣೆಗೆ ಎರ್ಡೊಗನ್ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸುಗಮಗೊಳಿಸಲು ಅಂಕಾರಾ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಟರ್ಕಿಯ ಅಧ್ಯಕ್ಷರು ಉಕ್ರೇನ್ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ ಸ್ಕೀ ಅವರೊಂದಿಗೆ ಚರ್ಚಿಸಿದ್ದು, ಫೆಬ್ರವರಿ ಆರಂಭದಲ್ಲಿ ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ಹಿನ್ನೆಲೆಯಲ್ಲಿ ನೆರವಿಗಾಗಿ ಉಭಯ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
2022ರ ಜುಲೈ 22 ರಂದು ರಷ್ಯಾ ಮತ್ತು ಉಕ್ರೇನ್ ನಿಂದ ಜಾಗತಿಕ ಮಾರುಕಟ್ಟೆಗಳಿಗೆ ಸರಬರಾಜುಗಳನ್ನು ಖಚಿತಪಡಿಸಿಕೊಳ್ಳಲು, ಧಾನ್ಯ ಮತ್ತು ರಸಗೊಬ್ಬರ ರಫ್ತಿನ ಕುರಿತು ಟರ್ಕಿ ಮತ್ತು ವಿಶ್ವಸಂಸ್ಥೆಯೊಂದಿಗೆ ಇಸ್ತಾನ್‌ಬುಲ್‌ನಲ್ಲಿ ಪ್ರತ್ಯೇಕವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದವು. 2022ರ ನವೆಂಬರ್ 19 ರಂದು ಮುಕ್ತಾಯಗೊಂಡ ಈ ಒಪ್ಪಂದವನ್ನು ಇನ್ನೂ 120 ದಿನಗಳವರೆಗೆ ವಿಸ್ತರಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಷ್ಯಾ- ಉಕ್ರೇನ್ ಮಧ್ಯದ ಯುದ್ಧ ಮುಕ್ತಾಯಗೊಳಿಸಲು ಶಾಂತಿ ಸಂಧಾನದ ಮಾತುಕತೆಗಳಿಗೆ ನೆರವು ನೀಡುವ ಬಗ್ಗೆ ಟರ್ಕಿಯ ಅಧ್ಯಕ್ಷರು ಬದ್ಧತೆ ವ್ಯಕ್ತಪಡಿಸಿದ್ದಾರೆ.
ನಿಲ್ಲದ ಯುದ್ಧದ ಮಧ್ಯೆ ಅಣ್ವಸ್ತ್ರ ಬಳಕೆಯ ರಷ್ಯಾ ಮಾತಿಗೆ ವಿರೋಧ ವ್ಯಕ್ತಪಡಿಸಿದ ಚೀನಾ ಕಳೆದೆರಡು ದಿನಗಳ ಹಿಂದಷ್ಟೇ ಜಾಗತಿಕ ಶಾಂತಿಯ ಸಲಹೆ ನೀಡಿದ್ದನ್ನಿಲ್ಲಿ ಸ್ಮರಿಸಬಹುದು.
*ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸೊಸೆ ಸೇರಿ ಇಬ್ಬರ ಬಂಧನ*
https://pragati.taskdun.com/bhatkalauttara-kannadamurder-casetwo-arrested/
ಡೋನಾಲ್ಡ್ ಟ್ರಂಪ್ ಹತ್ಯೆಗೆ ಎದುರು ನೋಡುತ್ತಿರುವ ಇರಾನ್
https://pragati.taskdun.com/iran-is-looking-forward-to-the-assassination-of-donald-trump/
*JDS ಎಂಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ; ಪ್ರತಿಷ್ಠಿತ ಶೋ ರೂಂ ಮಾಲೀಕ ವಶಕ್ಕೆ*
https://pragati.taskdun.com/mlc-bhojegowdacar-numberattempt-to-sellstolen-caracused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ