Latest

ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನ ಅನಾವರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನವನ್ನು ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರು ಶುಕ್ರವಾರ ಅನಾವರಣಗೊಳಿಸಿದರು.

ರಾಜಭವನದಲ್ಲಿ ಅವರು ಲಾಂಛನ ಬಿಡುಗಡೆ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಈ ವೇಳೆ ಕೊಪ್ಪಳ ವಿವಿ ಕುಲಪತಿ ಡಾ. ಪ್ರೊ. ಬಿ.ಕೆ. ರವಿ, ಕೊಡಗು ವಿವಿ ಕುಲಪತಿ ಡಾ. ಅಶೋಕ್ ಆಲೂರ್, ಬಾಗಲಕೋಟೆ ವಿವಿ ಕುಲಪತಿ ಡಾ. ದೇಶಪಾಂಡೆ, ಚಾಮರಾಜನಗರ ವಿವಿ ಕುಲಪತಿ ಡಾ. ಗಂಗಾಧರ್, ಬೀದರ್ ವಿವಿ ಕುಲಪತಿ ಡಾ. ಬಿರಾದಾರ್, ಹಾಸನ ವಿವಿ ಕುಲಪತಿ ಡಾ. ತಾರಾನಾಥ್ ಮತ್ತು ಹಾವೇರಿ ವಿವಿ ಕುಲಪತಿ ಡಾ. ಸುರೇಶ ಎಚ್. ಜಂಗಮಶೆಟ್ಟಿ ಉಪಸ್ಥಿತರಿದ್ದರು.

ಈ ಹಿಂದಿನ ಬಿಜೆಪಿ ಸರಕಾರ ರಾಜ್ಯಾದ್ಯಂತ ಆರಂಭಿಸಿದ 7 ವಿಶ್ವವಿದ್ಯಾಲಯಗಳಲ್ಲಿ ಕೊಪ್ಪಳ ವಿಶ್ವವಿದ್ಯಾಲಯವೂ ಒಂದಾಗಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ದೂರದ ಕಲಬುರ್ಗಿ ಹಾಗೂ ಧಾರವಾಡ, ಮತ್ತಿತರೆಡೆ ಹೋಗಿ ಶಿಕ್ಷಣ ಪಡೆಯಬೇಕಿದ್ದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

Home add -Advt

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ವಿವಿ ಸ್ಥಾಪನೆಗೆ ಸಾಕಷ್ಟು ಒತ್ತಾಯಗಳು ಕೇಳಿಬಂದಿದ್ದರೂ ಸ್ಥಳದ ಕೊರತೆಯಿಂದ ವಿವಿಯನ್ನು ಯಲಬುರ್ಗಾ ಮತ್ತು ತಳಕಲ್ ನಲ್ಲಿ ಸ್ಥಾಪಿಸಲಾಗಿದೆ.

https://pragati.taskdun.com/falling-water-level-in-rakkasakoppa-reservoir-will-belagavi-face-drought/

https://pragati.taskdun.com/state-governments-decision-to-revise-school-textbooks-again/

https://pragati.taskdun.com/if-modi-has-said-that-he-will-give-15-lakhs-give-evidence-union-minister-a-narayanaswamy/

 

 

Related Articles

Back to top button