
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ಪ್ರಕಟವಾಗಿರುವ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಯುವತಿಗೆ 362ನೇ ರ್ಯಾಂಕ್ ಬಂದಿದೆ.
ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರಾದ ಶೃತಿ ಯರಗಟ್ಟಿ ( ಹಾಲಿ ಅರಬಾವಿ ನಿವಾಸಿ) 362ನೇ ಪಡೆದು ಸಾಧನೆ ಮಾಡಿದ್ದಾರೆ. ಬಿಎಸ್‌ಸಿಯಲ್ಲಿ 7 ಚಿನ್ನದ ಪದಕ ಗಳಿಸಿದ್ದ ಶೃತಿ ಯರಗಟ್ಟಿ, 6ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಗಳಿಸಿದ್ದಾರೆ.
ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಕೆಸಿಡಿ ಧಾರವಾಡದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ತಂದೆ ಶಿವಾನಂದ ಯರಗಟ್ಟಿ ಶಿಕ್ಷಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.