Latest

ಉರಿಗೌಡ, ನಂಜೇಗೌಡ ಹೆಸರಲ್ಲಿ ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಉರಿಗೌಡ, ನಂಜೇಗೌಡ ಚರ್ಚೆ ವಿಚಾರ ದಿನದಿಂದ ದಿನಕ್ಕೆ ಕುತೂಹಲಗಳನ್ನು ಕೆರಳಿಸುತ್ತಿದೆ. ಆಡಳಿತ ಪಕ್ಷ ಬಿಜೆಪಿ ನಾಯಕರಿಂದ ಆರಂಭವಾದ ಉರಿಗೌಡ, ನಂಜೇಗೌಡ ಹೆಸರು ಪ್ರಸ್ತಾಪ ಇದೀಗ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದು, ಇದೀಗ ಉರಿಗೌಡ, ನಂಜೇಗೌಡರ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.

ಇಬ್ಬರ ತಂದೆ ಸಿ.ಟಿ.ರವಿ, ತಾಯಿ ಅಶ್ವತ್ಥನಾರಾಯಣ ಜನ್ಮ ಸ್ಥಳ ಮಲ್ಲೇಶ್ವರಂ ಬಿಜೆಪಿ ಕಚೇರಿ ಹುಟ್ಟಿದ್ದು ಚುನಾವಣೆ ಹೊತ್ತಲ್ಲಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಹೆಸರು: ಉರಿಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420

Home add -Advt

ಹೆಸರು: ನಂಜೇಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420

Related Articles

Back to top button