ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ನಾಲ್ಕು ವರ್ಷಗಳ ಹಿಂದೆ ಯುಎಸ್ ನ ವ್ಯಕ್ತಿಯೊಬ್ಬರನ್ನು ಬರ್ಬವಾಗಿ ಇರಿದಿದ್ದ “ವೂಲ್ಫ್ ಕಿಲ್ಲರ್” ಎಂಬ ಕುಖ್ಯಾತಿಯ ಭಾರತೀಯ ಮೂಲದ ವ್ಯಕ್ತಿಗೆ ನ್ಯಾಯಾಲಯ ಸಾಮಾಜಿಕ ಜಾಲತಾಣದಿಂದ ದೂರವಿರಲು ಆದೇಶಿಸಿದೆ.
ಪಂಕಜ್ ಭಾಸಿನ್ (37) 2018ರಲ್ಲಿ ಅಲೆಕ್ಸಾಂಡ್ರಿಯಾದ ಬ್ರಾಡ್ ಜಾಕ್ಸನ್ ಎಂಬ 60 ವರ್ಷದ ವ್ಯಕ್ತಿಗೆ ಬಾಕ್ಸ್ ಕಟರ್ ನಿಂದ 50 ಬಾರಿ ಬರ್ಬರವಾಗಿ ಇರಿದು ಅವರ ಕತ್ತು ಮುರಿದು ಹಾಕಿದ್ದ. ಬ್ರಾಡ್ ಜಾಕ್ಸನ್ ಒಬ್ಬ ಪೌರಾಣಿಕ ಜೀವಿ ಎಂದು ನಂಬಿ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದ.
2019ರಲ್ಲಿ ನಡೆದ ವಿಚಾರಣೆ ವೇಳೆ ಈತ ಮಾನಸಿಕವಾದ ತೊಂದರೆಯಿಂದ ಈ ಕೃತ್ಯ ನಡೆಸಿದ್ದಾಗಿ ಆತನನ್ನು ತಪ್ಪಿತಸ್ಥ ಎಂದು ಪರಿಗಣಿಸದೆ ನ್ಯಾಯಾಲಯ ಮೂರು ವರ್ಷಗಳ ಮಾನಸಿಕ ಆರೋಗ್ಯ ಸೌಲಭ್ಯದಲ್ಲಿ ವಿರಾಮದ ನಂತರ ಶರತ್ತುಬದ್ಧ ಜಾಮೀನಿನ ಮೇಲೆ ಪಂಕಜ್ ನನ್ನು ಬಿಡುಗಡೆಗೊಳಿಸಿತ್ತು.
ಆದರೆ ಪಂಕಜ್ ಭಾಸಿನ್ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನಿಗೆ ಸಾಮಾಜಿಕ ಜಾಲತಾಣಗಳಿಂದ ದೂರ ಇರುವಂತೆ ಆದೇಶಿಸಿದೆ.
ಕಾಂಗ್ರೆಸ್ ಉಪಾಧ್ಯಕ್ಷ ಸೇರಿ ಐವರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ