ಪ್ರಗತಿವಾಹಿನಿ ಸುದ್ದಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವೆಲ್ ವಿರುದ್ಧ ಅಮೆರಿಕಾದ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಖಲಿಸ್ತಾನ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ನೀಡಿದ ದೂರಿನ ಅನ್ವಯ ಭಾರತ ಸರ್ಕಾರಕ್ಕೆ ನ್ಯೂಯಾರ್ಕ್ ಕೋರ್ಟ್ ಸಮನ್ಸ್ ನೀಡಿದೆ.
ಭಾರತೀಯ ಗುಪ್ತಚರ ಇಲಾಖೆ ತನ್ನ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರೋಪಿಸಿ ಗುರುಪತ್ವಂತ್ ಸಿಂಗ್ ನ್ಯೂಯಾರ್ಕ್ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದ. ಇದಕ್ಕೆ ಪ್ರತಿಕ್ರಿಯೆಯಾಗಿ ಕೋರ್ಟ್ ಭಾರತ ಸರ್ಕಾರಕ್ಕೆ ಸಮನ್ಸ್ ನೀಡಿದೆ.
ಸಮನ್ಸ್ ನಲ್ಲಿ ಭಾರತ ಸರ್ಕಾರ, ಅಜಿತ್ ಧೋವೆಲ್ , ಭಾರತದ ಬೇಹುಗಾರಿಕಾ ಸಂಸ್ಥೆಯಾದ ರಾ ಮಾಜಿ ಮುಖ್ಯಸ್ಥ ಸಮಂತ್ ಗೋಯಲ್ ಹಾಗೂ ರಾ ಏಜೆಂಟ್ ವಿಕ್ರಮ್ ಯಾದವ್ ಹಾಗೂ ಉದ್ಯಮಿ ನಿಖಿಲ್ ಗುಪ್ತಾ ಹೆಸರನ್ನು ಉಲ್ಲೇಖಿಸಲಾಗಿದೆ.
ಭಾರತ ರಾ ಏಜೆನ್ಸಿ ಈಗಾಗಲೇ 20 ಹತ್ಯೆಗಳನ್ನು ನಡೆಸಿದ್ದು, ಅದರ ಹಿಟ್ ಲಿಸ್ಟ್ ಅಲ್ಲಿ ನಾನೂ ಕೂಡ ಇದ್ದೇನೆ. ಈಗ ನನ್ನ ಹತ್ಯೆಗೂ ಸಂಚು ರೂಪಿಸಿದೆ ಎಂದು ಗುರುಪತ್ವಂತ್ ಸಿಂಗ್ ಆರೋಪಿಸಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ