ಪ್ರಗತಿವಾಹಿನಿ, ನವದೆಹಲಿ: 2021 ರಲ್ಲಿ 1997 ವಾಹನ ಅಪಘಾತಗಳು ಚಾಲಕರು ಮೊಬೈಲ್ ಬಳಸಿದ್ದರಿಂದ ಸಂಭವಿಸಿದ್ದು, ಸಾವಿರಾರು ಜನರ ಸಾವು ಸಂಭವಿಸಿದೆ.
ಇಂಥ ಘಟನೆಗಳಲ್ಲಿ 1040 ಜನ ಜೀವ ತೆತ್ತಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯೊಂದು ತಿಳಿಸಿದೆ.
ಇವುಗಳಲ್ಲಿ 555 ಅಪಘಾತಗಳು ಸಿಗ್ನಲ್ ಉಲ್ಲಂಘನೆಯಿಂದಾಗಿ ನಡೆದಿದ್ದು, 222 ಜನ ಮೃತಪಟ್ಟಿದ್ದಾರೆ. 3,625 ಅಪಘಾತಗಳು ರಸ್ತೆಯಲ್ಲಿನ ಗುಂಡಿಗಳಿಂದ ಸಂಭವಿಸಿದ್ದು, 1481 ಜನ ಅಸುನೀಗಿದ್ದಾಗಿ ವರದಿ ತಿಳಿಸಿದೆ.
2021 ರಲ್ಲಿ ಸಂಭವಿಸಿದ ಒಟ್ಟು 4,12,432 ರಸ್ತೆ ಅಪಘಾತಗಳಲ್ಲಿ 1,53,972 ಜನ ಮೃತಪಟ್ಟಿದ್ದು, 3,84,448 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಸುರಕ್ಷತೆಗಾಗಿ ಸಚಿವಾಲಯ ಬೇರೆ ಬೇರೆ ವಿಧಾನಗಳನ್ನು ಅಳವಡಿಸಲು ಯೋಚಿಸಿದೆ ಎಂದು ವರದಿ ತಿಳಿಸಿದೆ.
*ಭೀಕರ ಸರಣಿ ಅಪಘಾತ; ಒಂದೇ ಕುಟುಂಬದ ಐವರ ದುರ್ಮರಣ*
https://pragati.taskdun.com/road-accident5-deathone-familytamilnadu/
ಆಯುರ್ವೇದ ತಜ್ಞ ಡಾ.ರೂಪೇಶ ಸಾಳುಂಕೆಗೆ ಪ್ರೇರಣಾ ಮೂರ್ತಿ ಪ್ರಶಸ್ತಿ ಗೌರವ
https://pragati.taskdun.com/ayurveda-expert-dr-rupesh-salunke-honored-with-prerana-murthy-award/
9 ಹುದ್ದೆಗಳು ಬೆಂಗಳೂರಿನಿಂದ ಸ್ಥಳಾಂತರ; ಸುವರ್ಣ ವಿಧಾನಸೌಧಕ್ಕೆ ಒಂದೂ ಇಲ್ಲ !
https://pragati.taskdun.com/9-posts-shifted-from-bangalore-suvarna-vidhana-soudha-has-none/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ