*ಹೊನ್ನಾವರದಲ್ಲಿ ಅಮಾನುಷ ಘಟನೆ: ಗರ್ಭ ಧರಿಸಿದ್ದ ಹಸುವಿನ ರುಂಡ ಕತ್ತರಿಸಿ ದೇಹವನ್ನೇ ಕೊಂಡೊಯ್ದ ದುಷ್ಕರ್ಮಿಗಳು?*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಕೆಲ ದಿನಗಳ ಹಿಂದೆ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಮಾನವೀಯ ಘಟನೆ ನಡೆದಿದ್ದು, ಹಸುವಿನ ರುಂಡವನ್ನು ಕತ್ತರಿಸಿರುವ ದುಷ್ಕರ್ಮಿಗಳು ದೇಹವನ್ನು ಕೊಂಡೊಯ್ದಿದ್ದಾರೆ.
ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಗರ್ಭ ಧರಿಸಿದ್ದ ಹಸುವನ್ನು ದುಷ್ಕರ್ಮಿಗಳು ರುಂಡ ಕತ್ತರಿಸಿ ಕೊಲೆ ಮಾಡಿದ್ದಾರೆ. ನಿನ್ನೆ ಮೇವಿಗಾಗಿ ಬಿಟ್ಟಿದ್ದ ಹಸು ರಾತ್ರಿಯಾದರೂ ವಾಪಸ್ ಆಗಿರಲಿಲ್ಲ. ಇಂದು ಬೆಳಿಗ್ಗೆ ಮಾಲೀಕ ಕೃಷ್ಣ ಆಚಾರ್ ಹಸುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಒಂದು ಕಡೆ ರಕ್ತ ಬಿದ್ದಿರುವುದು ಕಂಡುಬಂದಿದೆ. ಅಲ್ಲಿಯೇ ಹಸುವಿನ ಕಾಲು, ರುಂಡ ಪತ್ತೆಯಾಗಿದೆ. ಇದನ್ನು ಕಂಡ ಕೃಷ್ಣ ಆಚಾರ್ ಬೆಚ್ಚಿ ಬಿದ್ದಿದ್ದಾರೆ.
ದುಷ್ಕರ್ಮಿಗಳ್ಯಾರೋ ಹಸುವಿನ ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹವನ್ನು ಹೊತ್ತೊಯ್ದಿದ್ದಾರೆ. ಮಾಂಸ ಭಕ್ಷಣೆಗಾಗಿ ಹಸುವಿನ ದೇಹವನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತವಾಗಿದೆ. ಹಸುವನ್ನೇ ಅಮಾನವೀಯವಾಗಿ ಕತ್ತರಿಸಿ ಕೊಂಡೊಯ್ದ ದುರುಳರು ಯಾರು? ಕೃತ್ಯದ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ