Latest

12 ಆರೋಪಿಗಳ ಗಾಂಜಾ ಸೇವನೆ ದೃಢ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಗಾಂಜಾ ಪೆಡ್ಲರ್ ಗಳು ಮತ್ತು ಮಾದಕ ವ್ಯಸನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದ್ದ 15 ಜನರಲ್ಲಿ 12 ಜನರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಉತ್ತರ ಕನ್ನಡ ಜಿಲ್ಲಾ ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನ.22ರಂದು ನಡೆದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕಸ್ತೂರಬಾನಗರ, ನೆಹರೂನಗರ, ಇಂದಿರಾನಗರ, ಮರಾಠಿಕೊಪ್ಪ, ಕೆ.ಎಚ್.ಬಿ ಕಾಲೋನಿ, ಕೋಟೆಕೆರೆ ಸ್ಥಳಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ 15 ಜನರ ಪೈಕಿ 12 ವ್ಯಕ್ತಿಗಳು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಡಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

1 ಅಬೀದ ತಂದೆ ಮೊಹಮ್ಮದ ರಫೀಕ 19 ವರ್ಷ ವೃತ್ತಿ: ವಾಟರ ಸರ್ವಿಸ ಕೆಲಸ ಸಾ: ಇಂದಿರಾ ನಗರ ಹಾಲಿ
ಕೆ.ಹೆಚ.ಬಿ ಕಾಲೋನಿ ಶಿರಸಿ
2 ರೋಷನ ತಂದೆ ಪ್ರದೀಪ ಪಾಲೇಕರ 19 ವರ್ಷ ವೃತ್ತಿ: ಕಾರ್ಪೆಂಟರ ಸಾ: ಅಯ್ಯಪ ನಗರ ಶಿರಸಿ
3 ಪ್ರಥ್ವಿ ತಂದೆ ಮನೋಜ ನಾರ್ವೇಕರ 26 ವರ್ಷ ವೃತ್ತಿ: ವೆಲ್ಡಿಂಗ ಸಾ: ವಿವೇಕಾನಂದ ನಗರ ಶಿರಸಿ
4 ಪ್ರಸನ್ನ ತಂದೆ ಗಣಪತಿ ಕುರಬರ 42 ವರ್ಷ ವೃತ್ತಿ: ಚಾಲಕ ಸಾ: ಗಣೇಶ ನಗರ 1 ನೇ ಕ್ರಾಸ ಶಿರಸಿ
5 ಮೊಹಮ್ಮದ ಮೊಸೀನ ತಂದೆ ನಜೀರ ಅಹ್ಮದ ಶೇಖ : 23 ವರ್ಷ ವೃತ್ತಿ: ಗ್ಯಾರೇಜ ಸಾ: ಕಸ್ತೂರಬಾನಗರ ಶಿರಸಿ
6 ಮೊಹಮ್ಮದ ಯಾಸೀನ ತಂದೆ ನಜೀರ ಅಹ್ಮದ ಶೇಖ : 25 ವರ್ಷ ವೃತ್ತಿ: ಚಾಲಕ ಸಾ: ಕಸ್ತೂರಬಾನಗರ ಶಿರಸಿ
7 ದೀಪಕ ತಂದೆ ಪರಮೇಶ್ವರ ಕೇರಳಕರ : 21 ವರ್ಷ ವೃತ್ತಿ: ಮನೆಗೆಲಸ ಸಾ: ಅಯ್ಯಪ್ಪ ನಗರ ಶಿರಸಿ
8 ಸಮೀರ ಅಹ್ಮದ ತಂದೆ ಅಬ್ದುಲ ಘನಿ : 23 ವರ್ಷ ವೃತ್ತಿ: ಚಾಲಕ ಸಾ: ಕೋಟೆಕೆರೆ ಶಿರಸಿ
9 ಮುಸ್ತಾಕ ತಂದೆ ಅಬ್ದುಲರೆಹಮಾನ ಹೊಸಪೇಟ : 24 ವರ್ಷ ವೃತ್ತಿ: ವೆಲ್ಡಿಂಗ ಸಾ : ಇಂದಿರಾ ನಗರ ಶಿರಸಿ
10 ಶಿವಮೂರ್ತಿ ತಂದೆ ಈಶ್ವರ ನಾಯ್ಕ : 20 ವರ್ಷ ವೃತ್ತಿ: ವಿಧ್ಯಾರ್ಧಿ ಸಾ: ನೆಹರೂ ನಗರ ಶಿರಸಿ
11 ಪೈಜಲಖಾನ ತಂದೆ ಅಬ್ದುಲ ರೌವುಪ್ ಖಾನ : 26 ವರ್ಷ ವೃತ್ತಿ: ವೆಲ್ಡಿಂಗ ಸಾ : ಕಸ್ತೂರಬಾನಗರ ಶಿರಸಿ
12 ಮನ್ಸೂರು @ ಕಲಂದರ ತಂದೆ ಅಬ್ದುಲ್ ಕರಿಂ ಹೊನ್ನಾವರ : 24 ವರ್ಷ ವೃತ್ತಿ: ವ್ಯಾಪಾರ ಸಾ: ಇಂದಿರಾ ನಗರ
ಶಿರಸಿ.

ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ 1985 ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ ಅಧೀಕ್ಷಕರು ಡಾ|| ಸುಮನ .ಡಿ. ಪೆನ್ನೇಕರ ಉತ್ತರಕನ್ನಡ ಜಿಲ್ಲಾ ರವರ ನೇರ ನಿರ್ದೇಶನದ ಮೇರೆಗೆ, ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಎಸ್ ಬದರೀನಾಥ, ಮಾನ್ಯ ಪೊಲೀಸ ಉಪಾಧೀಕ್ಷಕರು ರವಿ .ಡಿ. ನಾಯ್ಕ ಶಿರಸಿ ಉಪವಿಭಾಗ, ಮಾನ್ಯ ಪೊಲೀಸ ವೃತ್ತ ನಿರೀಕ್ಷಕರು ರಾಮಚಂದ್ರ ನಾಯಕ ಶಿರಸಿ ವೃತ್ತ ರವರ ಮಾರ್ಗದರ್ಶನದಲ್ಲಿ ಪೊಲೀಸ ಉಪನಿರೀಕ್ಷಕರು ಭೀಮಾಶಂಕರ ಸಿನ್ನೂರ ಸಂಗಣ್ಣ ಶಿರಸಿ ಹೊಸಮಾರುಕಟ್ಟೆ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರ ನೇತ್ರತ್ವದಲ್ಲಿ ಪ್ರಥಮ ಬಾರಿಗೆ ಶಿರಸಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಡಿಜೆ ಮ್ಯೂಸಿಕ್ ಗೆ ಆಘಾತ; 63 ಕೋಳಿಗಳ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button