*ವಿದ್ಯಾರ್ಥಿನಿಗೆ ಇದೆಂತಹ ಶಿಕ್ಷೆ… 50 ಏಟು ಕೊಟ್ಟು, ಕಿವಿಹಿಡಿದು 200 ಬಾರಿ ಬಸ್ಕಿ ಹೊಡೆಸಿದ ಪ್ರಾಂಶುಪಾಲ*
ಪ್ರಗತಿವಾಹಿನಿ ಸುದ್ದಿ; ಲಖನೌ: 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಶಾಲೆಯ ಪ್ರಾಂಶುಪಾಲ ಕ್ರೂರವಾಗಿ ಶಿಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಗಣಿತ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಾಲೆಯ ಪ್ರಾಂಶುಪಾಲ ಆಕೆಯ ಎರಡೂ ಕೈಗಳಿಗೆ ಕೊಲಿನಿಂದ 50 ಬಾರಿ ಹೊಡೆದಿದ್ದಾನೆ. ಬಳಿಕ ಆಕೆಯ ಕಿವಿ ಹಿಡಿದುಕೊಂಡು 200 ಬಸ್ಕಿ ಹೊಡೆಸಿ ಅಮಾನವೀಯತೆ ಮೆರೆದಿದ್ದಾನೆ.
ಮಿರ್ಜಾಪುರ ಜಿಲ್ಲೆಯ ಶಬರಿ ಚುಂಗಿ ಭೈಂಶಿಯಾ ತೋಲಾ ಎಂಬ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೋಂ ವರ್ಕ ಮಾಡಿಲ್ಲ ಎಂದು ಈರೀತಿ ಶಿಕ್ಷಿಸಿದ್ದಾನೆ. ಶಿಕ್ಷಕನ ವರ್ತನೆಗೆ ವಿದ್ಯಾರ್ಥಿಗಳು ಹೆದರಿದ್ದಾರೆ. ಏಟು ತಿಂದ ವಿದ್ಯಾರ್ಥಿನಿ ಜ್ವರದಿಂದ ಬಳಲಿದ್ದು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ಪ್ರಾಂಶುಪಾಲನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ