
ಪ್ರಗತಿವಾಹಿನಿ ಸುದ್ದಿ: ಮಾಜಿ ಶಾಸಕ ವಿ.ಎಸ್.ಪಾಟೀಲ್, ಅವರ ತೋಟದ ಮನೆಯಲ್ಲಿಟ್ಟಿದ್ದ ಡಬಲ್ ಬ್ಯಾರಲ್ ಗನ್ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿದೆ. ಜಿಲ್ಲೆಯ ಮುಂಡಗೋಡ ತಾಲೂಕಿನ ಅಂದಲಗಿಯಲ್ಲಿ ಈ ಘಟನೆ ನಡೆದಿದೆ.
ವಿ.ಎಸ್.ಪಾಟೀಲ್ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಂದೂಕು ಕಳ್ಳತನವಾಗಿದೆ. ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ನಾಪತ್ತೆಯಾಗಿದೆ. ಮನೆ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಹುಡುಕಾಡಿದ್ದರು. ಆದರೂ ಎಲ್ಲಿಯೂ ಗನ್ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ 15 ದಿನಗಳ ಬಳಿಕ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ದೂರು ನೀಡಿದ್ದಾರೆ.


