Karnataka NewsLatest

*ಹರಿಹರ ಪಂಚಮಸಾಲಿ ಪೀಠದಲ್ಲಿ ದಿನಕ್ಕೊಂದು ಬೆಳವಣಿಗೆ: ಕೇವಿಯಟ್ ಅರ್ಜಿ ಸಲ್ಲಿಸಿದ ವಚನಾನಂದ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರು ಪೀಠದ ವಚನಾನಂದ ಶ್ರೀ ಹಾಗೂ ದರ್ಮದರ್ಶಿ ಮಂಡಳಿ ನಡುವಿನ ಜಟಾಪಟಿ ಮುಂದುವರೆದಿದೆ. ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಗಳನ್ನು ಉಚ್ಚಟನೆ ಮಾಡಿದರೂ ಪೀಠ ಬಿಟ್ಟುಕೊಟ್ಟದೇ ಮಠದಲ್ಲಿಯೇ ವಚಾನಂದ ಶ್ರೀ ವಾಸ್ತವ್ಯ ಹೂಡಿದ್ದಾರೆ.

ಯಾವುದೇ ಕಾರಣಕ್ಕು ಮಠ ಬಿಟ್ಟು ಹೋಗುವುದಿಲ್ಲ. ಇದು ನನ್ನ ವಿರುದ್ಧ ನಡೆಸಿರುವ ಷಡ್ಯಂತ್ರ. ಪಂಚಮ ಸಾಲಿ ಟ್ರಸ್ಟ್ ಗೆ ಲೆಕ್ಕ ಕೊಡುವಂತೆ ನಾನು ಕಿಳಿದ್ದಕ್ಕೆ ಟ್ರಸ್ಟ್ ನವರು ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆಸಿ ಉಚ್ಛಾಟನೆ ಮಾಡಿದ್ದಾರೆ. ಕಾನೂನು ಹೋರಾಟ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು. ಅದರಂತೆ ವಚನಾನಂದ ಶ್ರೀಗಳು ಇದೀಗ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.

Home add -Advt

ಮತ್ತೊಂದೆಡೆ ವಚನಾನಂದ ಶ್ರೀಗಳು ವಸತಿ ನಿಲಯದ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವನ್ನು ಟ್ರಸ್ಟ್ ಸದಸ್ಯರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಸದಸ್ಯರು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿಗೂ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button