Kannada NewsKarnataka NewsLatest

 ಸಂಗೀತ ಎನ್ನುವುದು ಒಂದು ದಿವ್ಯಾನುಭೂತಿ

 ಸಂಗೀತ ಎನ್ನುವುದು ಒಂದು ದಿವ್ಯಾನುಭೂತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಾಗನೂರು ರುದ್ರಾಕ್ಷಿ ಮಠದಲ್ಲಿ ನಡೆದ ವಚನ ಸಂಗೀತೋತ್ಸವದ ಕಾರ್ಯಕ್ರಮವನ್ನು  ಡಾ. ಗೊ. ರು. ಚನ್ನಬಸಪ್ಪ ಉದ್ಘಾಟಿಸಿದರು.

ಸಂಗೀತ ಎನ್ನುವುದು ಒಂದು ದಿವ್ಯಾನುಭೂತಿ ಅದಕ್ಕೆ ಯಾವುದೇ ಜಾತಿಭೇದವಿಲ್ಲ. ಶರಣರು ಜಾತ್ಯಾತೀತ ತಳಹದಿಯ ಮೇಲೆ ಸಮಾಜವನ್ನು ಕಟ್ಟಿದವರು. ಅಂತಹ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಅವುಗಳನ್ನು ಕೇಳುವುದೇ ಒಂದು ಆನಂದ ಎಂದು ಗೊ.ರು.ಚನ್ನಬಸಪ್ಪ ಹೇಳಿದರು.

Home add -Advt

ಆಶಯ ನುಡಿಗಳನ್ನಾಡಿದ ಚಂದ್ರಕಾಂತ ಬೆಲ್ಲದ್ ಅವರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಚನ ಸಾಹಿತ್ಯ ಜಗತ್ತಿನ ಮೊಟ್ಟ ಮೊದಲ ಸಂವಿಧಾನ, ಅದು ಉಳಿಯಬೇಕು ಬೆಳೆಯಬೇಕು ಎಂದು ತಿಳಿಸಿದರು.
ಆಶೀರ್ವಚನ ಮಾಡಿದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ತಿನ ಈ ವಚನ ಸಂಗೀತೋತ್ಸವ ಬೆಳಗಾವಿಯಲ್ಲಿ ಜರುಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದೇ ಸಂದರ್ಭದಲ್ಲಿ ಎಂ. ಆರ್. ಸಾಖರೆ ಅವರ ಇಂಗ್ಲೀಷ ಕೃತಿ ಲಿಂಗಾಯತ ಧರ್ಮ ಇತಿಹಾಸ ಮತ್ತು ದರ್ಶನ ಕೃತಿಯು ಸುಮಾರು ೭೭ ವರ್ಷಗಳ ನಂತರ ಅನುವಾದಗೊಂಡದ್ದು ಅತ್ಯಂತ ಸಂತೋಷದ ಸಂಗತಿ ಎಂದು ತಿಳಿಸಿದರು.

ಅಪ್ಪಾರಾವ್ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ವ್ಹಿ. ಎಸ್. ಮಾಳಿ ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button