Belagavi NewsBelgaum NewsKannada NewsKarnataka News

ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತ ವಿವಿಧ ಸ್ಪರ್ಧೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವಮಧ್ವ ಮಹಾಪರಿಷತ್ ಬೆಳಗಾವಿ ಘಟಕದ ವತಿಯಿಂದ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತವಾಗಿ ಜುಲೈ 21 ರಂದು  ಶ್ರೀ ಸತ್ಯ ಪ್ರಮೋದತೀರ್ಥ ಸಭಾಗ್ರಹ ರಾಣಿ ಚೆನ್ನಮ್ಮ ನಗರದಲ್ಲಿ ಸಾಯಂಕಾಲ 4 ರಿಂದ 6 ಗಂಟೆವರೆಗೆ 8 ರಿಂದ 15 ವರ್ಷದ ಮಕ್ಕಳಿಗಾಗಿ ಶ್ರೀ ಜಯತೀರ್ಥರ ಚಿತ್ರಕಲೆ ಸ್ಪರ್ಧೆ ಹಾಗೂ ಅವರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 

ಭಜನಾ ಮಂಡಳಿಗಳು/ ಮಹಿಳೆಯರಿಗಾಗಿ ಶ್ರೀ ಜಯತೀರ್ಥರ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿದೆ.  ಆದ್ದರಿಂದ ಎಲ್ಲರೂ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಆರಾಧನೆಗೂ ಕೂಡ ಕರೆದುಕೊಂಡು ಬಂದು ಶ್ರೀ ಜಯತೀರ್ಥರ ಅನುಗ್ರಹ ಹಾಗೂ ಗುರುಗಳಾದ ಶ್ರೀ ಸತ್ಯಾತ್ಮತೀರ್ಥರ ವಿಶೇಷ ಆಶೀರ್ವಾದ ಪಡೆದುಕೊಂಡು ಧನ್ಯರಾಗೋಣ.

Home add -Advt

ಜುಲೈ 26 ರಂದು ಶುಕ್ರವಾರ ಶ್ರೀ ಜಯತೀರ್ಥರ ಆರಾಧನೆಯ ಸಂದರ್ಭದಲ್ಲಿ ಬಹುಮಾನಗಳನ್ನು ಕೂಡ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಇವರನ್ನು ಸಂಪರ್ಕಿಸಿ. ರಾಧಾ ಗೊಗ್ಗಿ – 9448706846 ಹಾಗೂ ಸುನಿತಾ ಅಂಬೇಕರ- 9449308333

Related Articles

Back to top button