Latest

ಗಿಗಿಯನ್ನು ಎತ್ತಿ ಚುಂಬಿಸಿದ ವರುಣ್; ಜನ್ಮ ಜಾಲಾಡಿದ ಜಾಲತಾಣಿಗರು

ಪ್ರಗತಿವಾಹಿನಿ ಸುದ್ದಿ, ಮುಂಬೈ: ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ನಟ ವರುಣ್ ಧವನ್ ಅವರು ಸೂಪರ್ ಮಾಡೆಲ್ ಗಿಗಿ ಹಡಿದ್ ಅವರನ್ನು ಅವರ ಒಪ್ಪಿಗೆ ಇಲ್ಲದೆ ಎತ್ತಿ ಹಿಡಿದು ಚುಂಬಿಸಿರುವುದು ಭಾರೀ ಟೀಕಾಸ್ತ್ರಗಳಿಗೆ ಗುರಿಯಾಗಿದೆ.

ಅಮೆರಿಕದ ಸೂಪರ್ ಮಾಡೆಲ್ ಗಿಗಿ ಹಡಿದ್ ಅವರನ್ನು ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ 2 ನೇ ದಿನ, ಗಿಗಿ ಅತಿಥಿಗಳಿಗಾಗಿ ಆವರಣದಲ್ಲಿ ಆಯೋಜಿಸಲಾದ ಸಣ್ಣ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು. ವರುಣ್ ಧವನ್ ಗಿಗಿಯನ್ನು ವೇದಿಕೆಗೆ ಆಹ್ವಾನಿಸಿ, ತನ್ನ ತೋಳುಗಳಲ್ಲಿ ಎತ್ತಿಕೊಂಡು ನಂತರ ಕೆನ್ನೆಗೆ ಮುತ್ತಿಟ್ಟರು.

ಈ ಘಟನೆಯಿಂದ ಇರಿಸುಮುರುಸಿಗೆ ಒಳಗಾದ ಗಿಗಿ ವೇದಿಕೆಯಿಂದ ಈಚೆ ಬಂದ ನಂತರವೂ ಮೂಡ್ ನಲ್ಲಿ ಇರಲಿಲ್ಲ. ಅವರ ಮುಖ ಬಾಡಿಹೋಗಿತ್ತು. ಆದರೆ ಇತ್ತ ನೆಟ್ಟಿಗರು ಮಾತ್ರ ಜಾಲತಾಣದಲ್ಲಿ ವರುಣ್ ಜನ್ಮ ಜಾಲಾಡಿದ್ದಾರೆ.

https://pragati.taskdun.com/bikecaraccidentfatherdaughterdeathramanagara/
https://pragati.taskdun.com/h-m-gopalakrishnacongress-ticketkpcc-office/
https://pragati.taskdun.com/which-cars-have-been-discontinued-in-india-from-this-month/

Home add -Advt

Related Articles

Back to top button