ವಾಸ್ಕೋ-ಬೆಳಗಾವಿ ವಿಶೇಷ ಟ್ರೇನ್ – ದೂಧಸಾಗರ ಓಪನ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ವಾಸ್ಕೋ ಡ ಗಾಮಾ ಟು ಬೆಳಗಾವಿವರೆಗೆ ಪ್ರಗತಿ ಪರಿಶೀಲನೆ ನಡೆಸಿದ ರೈಲ್ಬೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ದೂಧಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದರು. ವಾಸ್ಕೋ-ಬೆಳಗಾವಿ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.
ಸುರೇಶ ಅಂಗಡಿ ಅವರು ಮಂಗಳವಾರ ಬೆಳಗಾವಿ ರೈಲ್ವೆ ನಿಲ್ದಾಣದಿಂದ ಗೋವಾವರೆಗಿನ ಪ್ರಗತಿ ಪರಿಶೀಲನೆ ನಡೆಸಿದರು. ದೂಧ ಸಾಗರ ಜಲಪಾತವನ್ನೂ ಪರಿಶೀಲಿಸಿ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದರು. ಪ್ರಧಾನ ಮುಖ್ಯ ಅಭಿಯಂತರ ವಿಜಯಕುಮಾರ ಅಗರವಾಲ್, ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ರೈಲ್ವೆ ಇಲಾಖೆ ವಿಶೇಷ ಅಧಿಕಾರಿ ಅನಿಷ್ ಹೆಗಡೆ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
ಇದಕ್ಕೂ ಮೊದಲು ಬೆಳಗಾವಿಯಲ್ಲಿ ಮಂಗಳವಾರ ಜಿಲ್ಲೆಯ ಸಾರ್ವಜನಿಕ ಅಹವಾಲುಗಳನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ವೀಕರಿಸಿದರು.
ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಕುಂಬಾರ ಸಂಗಪ್ಪ ಬಸಪ್ಪ ಚಹಾ ಕುಡಿಯಲು ತಾವು ತಯಾರಿಸುವ ಮಣ್ಣಿನ ಲೋಟ, ಮಡಿಕೆಗಳನ್ನು ತೋರಿಸಿ, ತಮಗೆ ಗುಡಿ ಕೆಲಸ ಕೊಡಲು ಕೇಳಿಕೊಂಡರು. ಪರಿಶೀಲಿಸಲು ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸಹ ಮಂಗಳವಾರ ಸುರೇಶ ಅಂಗಡಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ