ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಇಎಸ್ ನಿಷೇಧ ಮಾಡುವಂತೆ ಆಗ್ರಹಿಸಿ ಡಿಸೆಂಬರ್ 31ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ. ದಿನಾಂಕ ಬದಲಾವಣೆ ಮಾಡುವುದೂ ಇಲ್ಲ. ಬಂದ್ ಮಾಡೇ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಡಿಸೆಂಬರ್ 31ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ಘೋಷಿಸಿದ್ದರೆ, ಇನ್ನು ಕೆಲ ಸಂಘಟನೆಗಳು ಗೊಂದಲದಲ್ಲಿವೆ, ನಮಗೆ ಯಾವುದೇ ರೀತಿಯ ನೈತಿಕ ಬೆಂಬಲ ಬೇಕಿಲ್ಲ. ಸಂಪೂರ್ಣ ಬೆಂಬಲ ನೀಡಿ ಕರ್ನಾಟಕ, ಕನ್ನಡಿಗರ ಪರವಾಗಿ ಧ್ವನಿ ಎತ್ತಿ ಎಂದು ಕರೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಬಂದ್ ಗೆ ಬೆಂಬಲ ಘೋಷಣೆ ಮಾಡಬೇಕು. ಕನ್ನಡಕ್ಕೆ ಆದ ಅವಮಾನ ಕನ್ನಡ ಚಿತ್ರರಂಗಕ್ಕೂ ಆದ ಅವಮಾನ. ಇದು ಕನ್ನಡಿಗರ ಅಳಿವು, ಉಳಿವಿನ ಪ್ರಶ್ನೆ. ನಾವು ಚಿತ್ರರಂಗದ ವಿರುದ್ಧ ಬಂದ್ ಮಾಡುತ್ತಿಲ್ಲ. ಕನ್ನಡ ಬಾವುಟ ಸುಟ್ಟವರ ವಿರುದ್ಧ, ಎಂಇಎಸ್ ಪುಂಡಾಟದ ವಿರುದ್ಧ ಹೋರಾಡುತ್ತಿದ್ದೇವೆ. ಡಿಸೆಂಬರ್ 30ಕ್ಕೆ ಬೆಂಬಲ ಕೊಡುತ್ತೇವೆ ಎಂದು ಹೇಳುವವರು ಡಿಸೆಂಬರ್ 31ರಂದು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡಲಿ ಎಂದು ಆಗ್ರಹಿಸಿದರು.
ಎಂಇಎಸ್ ನಿಷೇಧ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 29ರವರೆಗೆ ಡೆಡ್ ಲೈನ್ ಕೊಡುತ್ತೇವೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಬಂದ್ ವಿಚಾರದಲ್ಲಿ ಸರ್ಕಾರ ನಾಟಕವಾಡುವಂತಿಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ; ಸುಳಿವು ನೀಡಿದ ಸಿಎಂ
ಗೋಲ್ಡ್ ಖರೀದಿಗೆ ಪ್ಲಾನ್ ಮಾಡಿದ್ದೀರಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ