Belagavi NewsBelgaum News

*ವೀರಶೈವ ವಧು ವರ ಅನ್ವೇಷಣ ಪಾಲಕರ ಬೃಹತ್ ಸಮಾವೇಶ*

ಪ್ರಗತಿವಾಹಿನಿ ಸುದ್ದಿ: ಕೆ.ಎಲ್.ಇ ಸಂಸ್ಥೆ ಅಖಿಲ ಭಾರತ ವೀರಶೈವ ಮಹಾಸಭೆ ಸಹಯೋಗದಿಂದ ಸ್ಥಾಪಿತವಾದ ವೀರಶೈವ ವಧು ವರ ಅನ್ವೇಷಣ ಕೇಂದ್ರದ 60 ನೆಯ ವಧುವರ ಪಾಲಕರ ಬೃಹತ್ ಸಮಾವೇಶವು ಬೆಳಗವಿ ನಗರದ ಜೀರಗೆ ಭವನದಲ್ಲಿ ಜರುಗಿತು.

ಸಮಾವೇಶದ ಉದ್ಘಾಟನೆ ಯನ್ನು ನೆರವೇರಿಸಿದ ಕೆ.ಎಲ್ ಇ. ಸಂಸ್ಥೆಯ ಕಾರ್ಯಾಧ್ಯಕ್ಷರೂ, ಕೇಂದ್ರ ಅಖಿಲ ಭಾರತ ವೀರಶೈವ ಮಹಾಸಭೆ ಯ ಉಪಾಧ್ಯಕ್ಷರೂ ಆದ ಡಾ. ಪ್ರಭಾಕರ ಕೋರೆ ಅವರು ವೀರಶೈವ ಲಿಂಗಾಯತ ಸಮುದಾಯದ ವಧು ವರರ ಕಲ್ಯಾಣ ಮಹೋತ್ಸವವು ಸುಲಭವಾಗಿ ಸಕಾಲದಲ್ಲಿ ಜರುಗಿ ಅವರ ದಾಂಪತ್ಯ ಜೀವನವು ಸುಖಮಯ ವಾಗಲಿ ಎನ್ನುವ ಸದುದ್ದೇಶ ದಿಂದ ಈ ಸಮಾವೇಶವನ್ನು ಆಯೋಜಿಸ ಲಾಗಿದೆ,ಪಾಲಕರು ಮತ್ತು ವಧು ವರರು ಲಿಂಗಾಯತ ಒಳಪಂಗಡಗಳನ್ನು ಮರೆತು ವರ ಮತ್ತು ಕನ್ಯೆಯರ ಶಿಕ್ಷಣಮತ್ತು ಸಂಸ್ಕ್ರತಿ ಗೆ ಮಹತ್ವ ಕೊಟ್ಟು ಬಾಳ ಸಂಗಾತಿ ಗಳ ಆಯ್ಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿ ಮಹಾಸಭೆಯ ಸಮಾಜ ಮುಖಿ ಕಾರ್ಯ ಗಳನ್ನು ಪ್ರಶಂಸಿದರು.


ಅತಿಥಿಯಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೆ ಶರಣೆ ರತ್ನ ಪ್ರಭಾ ಬೆಲ್ಲದ ಅವರು ಮಹಾಸಭೆಯ ಜಿಲ್ಲಾ ಘಟಕವು ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಬಡ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗಾಗಿ ಬೆಳಗಾವಿಯ ಸುಭಾಸ ನಗರದಲ್ಲಿ ಉಚಿತ ವಸತಿ ನಿಲಯವನ್ನು ಪ್ರಾರಂಭಿಸಲಾಗುತ್ತಿದೆ ಸಮಾಜ ಬಂಧುಗಳು ಈ ಕೈಂಕರ್ಯಕ್ಕೆ ಕೈ ಜೋಡಿಸ ಬೇಕು ಎಂದು ಮನವಿ ಮಾಡಿದರು.


ಅಧ್ಯಕ್ಷತೆ ವಹಿಸಿದ್ದ ಅನ್ವೇಷಣ ಕೇಂದ್ರದ ಅಧ್ಯಕ್ಷ ರಾದ ಡಾ ಎಫ್ ವಿ ಮಾನ್ವಿ ಅವರು ಇಂದಿನ ದಿನಮಾನದಲ್ಲಿ ಪಾಲಕರು ತಮ್ಮ ಉದ್ಯೋಗ ವ್ಯವಹಾರ ಗಳಲ್ಲಿ ಬಿಜಿ ಇರುವದರಿಂದ ತಮ್ಮ ಮಕ್ಕಳಿ ಗೆ ಯೋಗ್ಯ ಬಾ ಳ ಸಂಗಾತಿಯನ್ನು ಹುಡುಕುವದು ಕೊಂಚ ಕಷ್ಟದ ಕೆಲಸ ವಾದ್ದರಿಂದ ಸಮಾಜ ಬಾಂಧವರ ಪ್ರಯೋಜನ ಕ್ಕಾಗಿ ಇಂತಹ ಸಮಾವೇಶ ಗಳನ್ನು 1988 ರಿಂದ ನಡೆಸುತ್ತ ಬರಲಾಗಿದೆ,ಡಾ ಕೋರೆಯವರು ಈ ಸುಸಜ್ಜಿತ ಸಭಾಂಗಣ ವನ್ನು ಸಮಾಜ ಬಾಂಧವರ ಒಳಿತಿಗಾಗಿ ಉಚಿತ ವಾಗಿ ನೀಡಿ ಸಹಕರಿಸಿ ದ್ದಾರೆ ನಿಮ್ಮ ಮನಸ್ಸಿನ ಅಪೇಕ್ಷೆ ಈಡೇರಲಿ ವೈವಾಹಿಕ ಸಂಬಂಧ ಗಳು ಕುದುರಲಿ ಎಂದು ಶುಭ ಹಾರೈಸಿದರು. ಕೇಂದ್ರದ ನಿರ್ದೇಶಕ ಪ್ರಕಾಶ ಬಾಳೇ ಕುಂದ್ರಿ ವೇದಿಕೆಯ ಮೇಲಿದ್ದರು.

ಗೌರವ ಕಾರ್ಯದರ್ಶಿ ಡಾ ಗುರುದೇವಿ ಹುಲೆಪ್ಪ ನವರ ಮಠ ಪ್ರಾಸ್ತಾವಿಕನುಡಿ ನೀಡಿದರು, ಆಶಾ ಯಮಕನ ಮರಡಿ ಅವರು ವಚನ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು. ಅಂಗಡಿ ವೀರಭದ್ರಪ್ಪ ಅವರು ವಧು ವರ ಪರಿಚಯ ನೀಡಿ ದರು ಶ್ರೀಮತಿ ಜ್ಯೋತಿ ಬಾದಾಮಿ ವಂದಿಸಿದರು. ಆರುನೂರಕ್ಕೂ ಅಧಿಕ ವಧು ವರ ಪಾಲಕರು ಸಮಾವೇಶದ ಪ್ರಯೋಜನ ಪಡೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button