*ಧರ್ಮಸ್ಥಳದ ಭಕ್ತರಿಗೆ ಮಹತ್ವದ ಸಂದೇಶ ನೀಡಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಈ ನಡುವೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ, ಎಲ್ಲರೂ ಶಾಂತಿಯನ್ನು ಕಾಪಾಡಿ, ತಾಳ್ಮೆಯಿಂದ ಇರಿ. ನಾನು ಯಾವತ್ತೂ ಸತ್ಯ ಬಿಟ್ಟು ಹೋಗಿಲ್ಲ ಎಂದು ತಿಳಿಸಿದ್ದಾರೆ.
ಎಸ್ ಐಟಿ ತನಿಖೆ ನಡೆಸುತ್ತಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚೇನು ಮಾತನಾಡಬಾರು ಎಂದು ಆದೇಶವಿದೆ. ಎಲ್ಲಾ ಜೈನಮುನಿಗಳು ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಧರ್ಮಸ್ಥಳ ಬೆಳವಣಿಗೆಯಿಂದ ಪುರುಷರಿಗಿಂತ ಹೆಚ್ಚು ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ವೇದನೆ ಪಡುತ್ತಿದ್ದಾರೆ. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ ಹೋರಾಟಕ್ಕೂ ತಯಾರಾಗಿದ್ದಾರೆ. ಆದರೆ ಅಂತಹ ಹೋರಾಟದ ಅಗತ್ಯವಿಲ್ಲ. ಈಗ ನಮಗೆ ಫಲ ಸಿಗುತ್ತಿದೆ. ಎಲ್ಲರೂ ಶಾಂತಿಯನ್ನು ಕಾಪಾಡಬೇಕು. ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಇಂದು ಧರ್ಮಸ್ಥಳದಲ್ಲಿ ಜೈನಮುನಿಗಳ ಕಾರ್ಯಕ್ರಮ ನಡೆದಿದ್ದು, ಹಲವು ಜೈನ ಮುನಿಗಳು, ಭಟ್ಟಾರಕರು, ವಿವಿಧ ಜೈನ ಸಂಘಟನೆಗಳು, ಭಕ್ತರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಧರ್ಮಸ್ಥಳ ಪ್ರವೇಶದ್ವಾರದಿಂದ ಧರ್ಮಸ್ಥಳ ದೇಗುಲದವರೆಗೆ ಪಾದಯಾತ್ರೆ ನಡೆಯಿತು.