Latest

ಆನಂದ ಸಿಂಗ್ ರಾಜಿನಾಮೆ ಇಲ್ಲ ; ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಖಾತೆ ಸರಿಯಾಗಿಲ್ಲ ಎಂದು ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ ಸಿಂಗ್ ಅವರು ಬುಧವಾರ ಸಂಜೆ ಮುಖ್ಯಮಂತ್ರಿಗಳ ಜೊತೆಗೆ 2 ಗಂಟೆಗಳ ಕಾಲ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆನಂದ ಸಿಂಗ್ ಮತ್ತು ಆರ್.ಅಶೋಕ ಅವರು ಮಾಹಿತಿ ನೀಡಿದರು.

Home add -Advt

ಆನಂದ ಸಿಂಗ್ ಅವರು ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ನಿಜ. ಅವರಿಗೆ ಪ್ರಸ್ತುತ ಪರಿಸ್ಥಿತಿ ಕುರಿತು ಮನದಟ್ಟು ಮಾಡಲಾಗಿದೆ. ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಲಾಗಿದೆ. ಅವರು ಎಲ್ಲದಕ್ಕೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಆನಂದ್ ಸಿಂಗ್, ರಾಜಿನಾಮೆ ಕೊಡುತ್ತೇನೆ ಎಂದು ನಾನು ಹೇಳಿಯೇ ಇಲ್ಲ. ನನ್ನ ಬೇಡಿಕೆ ಹೇಳಿದ್ದೇನೆ. ಈಡೇರಿಸುವುದಾಗಿ ಅವರು ತಿಳಿಸಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗೋಣ ಎಂದಿದ್ದಾರೆ. ನಾನು ಒಪ್ಪಿಕೊಂಡಿದ್ದೇನೆ ಎಂದರು.

ಕೂತೂಹಲ ಮೂಡಿಸಿದ ಆನಂದ ಸಿಂಗ್ ಹೆಜ್ಜೆ: ಎಲ್ಲ ಹೇಳಿದ್ದಾರೆ ಎಂದ ಸಿಎಂ

Related Articles

Back to top button