Belagavi NewsBelgaum NewsKannada NewsKarnataka NewsLatest

ವಿದ್ಯುತ್ ಶಾಕ್ ಗೆ ತರಕಾರಿ ವ್ಯಾಪಾರಿ ಸಾವು

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ವಿದ್ಯುತ್ ಶಾಕ್ ನಿಂದಾಗಿ ತರಕಾರಿ ವ್ಯಾಪಾರಸ್ಥನೋರ್ವ ಸಾವಿಗೀಡಾಗಿದ್ದಾನೆ.

ಹುಕ್ಕೇರಿ ತಾಲೂಕಿನ ಸೋಲ್ಲಾಪುರದ ಮಾರುತಿ ಜ್ಯೋತೆಪ್ಪ ಗೊಲಬಾವಿ (32) ಮೃತ ಯುವಕ.

ನಿಪ್ಪಾಣಿಯ ಟಿಳಕ ಚೌಕದಲ್ಲಿ ಗುರುವಾರ ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೃತ ಯುವಕನ ಸಹೋದರ ಶಿವಾನಂದ ದೂರು ದಾಖಲಿಸಿದ್ದು, ಹೆಸ್ಕಾಂ ಸಹಾಯಕ ಎಂಜಿನಿಯರ್ ನನ್ನು ಆರೋಪಿಯನ್ನಾಗಿಸಲಾಗಿದೆ.

ಸಹೋದರರಿಬ್ಬರೂ ತರಕಾರಿ ವ್ಯಾಪಾರಸ್ಥರಾಗಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button