LatestUncategorized

ಹೃದಯಾಘಾತದಿಂದ ಹಿರಿಯ ನಟಿ ನಿಧನ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್‍ನ ಹಿರಿಯ ನಟಿ ತಬಸ್ಸುಮ್ (78) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಬಾಲ ನಟಿಯಾಗಿ 1947ರಲ್ಲೇ ಅವರು ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮೇರಾ ಸುಹಾಗ್, ಬಾರಿ ಬೆಹೆನ್, ದೀದಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. 1990ರಲ್ಲಿ ತೆರೆ ಕಂಡ ಸ್ವರ್ಗ್ ಅವರು ಅಭಿನಯಿಸಿದ ಕೊನೇಯ ಚಿತ್ರವಾಗಿದೆ.


ಅಲ್ಲದೇ ದೂರದರ್ಶನದಲ್ಲಿ ಜನಪ್ರಿಯವಾಗಿದ್ದ ಫೂಲ್ ಕಿಲೇಹೈ ಗುಲ್ಶನ್ ಗುಲ್ಶನ್ ಸರಣಿಯನ್ನು ಅವರು ನಡೆಸಿಕೊಟ್ಟಿದ್ದರು.

ಬೆಳಗಾವಿ ಚಳಿಗಾಲ  ಅಧಿವೇಶನ; ಹೊಟೆಲ್ ಮಾಲಿಕರ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ

Home add -Advt

https://pragati.taskdun.com/belgaum-winter-session-the-dc-held-an-emergency-meeting-of-the-hotel-owners/

Related Articles

Back to top button