*ಯಾವ ಜಿಲ್ಲೆಯೂ ಯಾರಪ್ಪನ ಆಸ್ತಿಯಲ್ಲ; ಪ್ರಜಾಪ್ರಭುತ್ವದಲ್ಲಿ ಜಹಗೀರ್ ಇರಲು ಸಾಧ್ಯವಿಲ್ಲ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಭ್ಯಲ್ಯ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕುಮಾರಸ್ವಾಮಿಯವರ ಎಲ್ಲಾ ಹೇಳಿಕೆಗಳಿಗೂ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಗೀರ್ ಕೊಟ್ಟಿಲ್ಲ. ಕರ್ನಾಟಕದ ಯಾವ ಜಿಲ್ಲೆಯೂ ಯಾರಪ್ಪನ ಆಸ್ತಿಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಜಹಗೀರ್ ಇರೋಕೆ ಆಗಲ್ಲ. ಜೆಡಿಎಸ್ ನವರಿಗೆ 5 ಜಿಲ್ಲೆಗಳನ್ನು ಕಳೆದುಕೊಳ್ಳುವ ಆತಂಕವಿದೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಸಿದ್ಧಾಂತದ ಮೂಲಕ ಚುನಾವಣೆ ಎದುರಿಸುತ್ತೇವೆ. ಬಿಜೆಪಿ ಜಾತಿಯಡಿಯಲ್ಲ, ಹಿಂದೂತ್ವದ ಅಡಿಯಲ್ಲಿ ಬೆಳೆದಿದೆ. ಅದೇ ಸಿದ್ಧಾಂತದಲ್ಲಿ ಚುನಾವಣೆ ಎದುರಿಸುತ್ತೇವೆ. ಅಭಿವೃದ್ದಿ ಹಾಗೂ ಸಿದ್ಧಾಂತದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ನಾಳೆಯಿಂದ ಅಮಿತ್ ಶಾ ಮೂರು ದಿನಗಳ ಕಾಲ ಕರ್ನಾಟಕ ಪ್ರವಾಸ ಮಾಡುತ್ತಾರೆ. ಅಮಿತ್ ಶಾ ಒಳ್ಳೆಯ ಆಟಗಾರ ಯಾವ ಪಿಚ್ ಆದ್ರೂ ಆಡುತ್ತಾರೆ. ಯುಪಿ ಚುನಾವಣೆಯಲ್ಲಿ ಅಮಿತ್ ಶಾ ಬದಲಾವಣೆ ತಂದಿದ್ದಾರೆ. ಅಮಿತ್ ಶಾ ಬಂದರೆ ಕಾರ್ಯಕರ್ತರಿಗೆ ವಿಶ್ವಾಸ ಹೆಚ್ಚುತ್ತದೆ. ಇಡೀ ರಾಜ್ಯವನ್ನು ಫೋಕಸ್ ಮಾಡುತ್ತೇವೆ. ಒಂದು ಕಾಲದಲ್ಲಿ ಬಿಜೆಪಿ ಹೇಗಿತ್ತು, ಈಗ ಹೇಗಿದ್ದೇವೆ. ಪರಿಶ್ರಮ ಹಾಕಿದರೆ ಮುಂದೊಂದು ದಿನ ಲಾಭ ಸಿಗುತ್ತದೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದಲ್ಲಿಯೂ ನಾವು ಗೆಲ್ಲುತ್ತೇವೆ. ಮಂಡ್ಯ ಯಾರ ಆಸ್ತಿಯೂ ಅಲ್ಲ, ಇದು ಹೆಚ್.ಡಿ.ಕೆಗೂ ಗೊತ್ತು ಎಂದು ಹೇಳಿದ್ದಾರೆ.
*2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ*
https://pragati.taskdun.com/best-mla-2022r-v-deshpandecongress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ