*ಸಚಿವೆ ಶಶಿಕಲಾ ಜೊಲ್ಲೆಗೆ ಹ್ಯಾಟ್ರಿಕ್ ಗೆಲುವು ನೀಡಿ; ಡಿಸಿಎಂ ಸ್ಥಾನಕ್ಕೆ ತಲುಪಿಸಿ; ಮಹಾರಾಷ್ಟ್ರ ಬಿಜೆಪಿ ಮಹಿಳಾ ರಾಜ್ಯಾಧ್ಯಕ್ಷೆ ಚಿತ್ರಾ ವಾಘಾ ಕರೆ*
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಪ್ರಚಾರಸಭೆಗೆ ನೆರೆದ ಇಷ್ಟೊಂದು ಜನಸಮುದಾಯ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರಿಂದ ಜರುಗಿದ ಅಭಿವೃದ್ಧಿಪರ ಕಾರ್ಯಗಳಿಗೆ ರಸೀದಿಯಾಗಿದೆ. ದೇಶಕ್ಕಾಗಿ, ಧರ್ಮಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಬಹುಮತಗಳಿಂದ ಆರಿಸಿ ತನ್ನಿ’ ಎಂದು ಬಿಜೆಪಿ ಪಕ್ಷದ ಮಹಿಳಾ ಘಟಕದ ಮಹಾರಾಷ್ಟ್ರ ರಾಜ್ಯಾಧ್ಯಕ್ಷೆ ಚಿತ್ರಾ ವಾಘ ಹೇಳಿದರು.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರ ನಿಪ್ಪಾಣಿಯಲ್ಲಿನ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘75 ವರ್ಷಗಳ ನಂತರ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ರೈತರಿಗೆ, ಮಹಿಳೆಯರಿಗೆ ಯುವಕರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯ ಮಾಡಿದ್ದಾರೆ. ಮಹಿಳೆಯರಿಗೆ ಸನ್ಮಾನಿಸುವ ಕಾರ್ಯ ಪ್ರಧಾನಿ ಮೋದಿಯವರು ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರು ವಿವಿಧ ಇಲಾಖೆಗಳ ಮೂಲಕ ಕ್ಷೇತ್ರದೊಂದಿಗೆ ರಾಜ್ಯದಲ್ಲಿ ಮಹಿಳೆಯರ ಕಲ್ಯಾಣ ಹಾಗೂ ಮಂದಿರಗಳ ಜೀರ್ಣೋದ್ಧಾರ ಮಾಡಿದ್ದಾರೆ. ಈಗ ಅವರ ಹ್ಯಾಟ್ರಿಕ್‌ಗಿಂತಲೂ ಅತಿಹೆಚ್ಚ ಮತಗಳಿಂದ ಗೆಲ್ಲಿಸಿ ಅವರನ್ನು ಡಿಸಿಎಂ ಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ಜನರದ್ದಾಗಿದೆ’ ಎಂದರು.
ಸಚಿವೆ ಜೊಲ್ಲೆಯವರ ಹ್ಯಾಟ್ರಿಕ್ ವಿಜಯದ ನಂತರ ಇದೆ ಮೈದಾನದಲ್ಲಿ ವಿಜಯಸಭೆ ಜರುಗಲಿದೆ, ನಾನೂ ಬರುವೆ. ಕೈಲಾಗದೆಂದು ತಿಳಿದ ನಂತರ ಕಾಂಗ್ರೆಸ್ ಹಾಗೂ ಎನ್‌ಸಿಪಿ ಈಗ ಧನಶಕ್ತಿ ವಿರುದ್ಧ ಜನಶಕ್ತಿ ಎನ್ನುತ್ತ ಕುತಂತ್ರ ನಡೆಸಿದ್ದಾರೆ’ ಎಂದು ಆರೋಪಿಸಿ ‘ದೇಶಕ್ಕಾಗಿ, ಧರ್ಮಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಬಹುಮತಗಳಿಂದ ಆರಿಸಿ ತಂದು ಅವರನ್ನು ಡಿಸಿಎಂ ಹುದ್ದೆಗೇರಿಸಿ’ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ‘ಕಳೆದ 10 ವರ್ಷಗಳಲ್ಲಿ 2000 ಕೋಟಿ ರೂ. ಅಭಿವೃದ್ಧಿಪರ ಕಾರ್ಯಗಳನ್ನು ಮಾಡುವ ಮೂಲಕ ನಾನು ರಾಜಕಾರಣಕ್ಕಿಂತಲೂ ಸಮಾಜಕಾರಣ ಹಾಗೂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇನೆ. ಹೀಗೆಯೇ ವಿಶ್ವಾಸ ಮತ್ತೊಮ್ಮೆ ತೋರಿ ನನ್ನನ್ನು ಗೆಲ್ಲಿಸಿ’ ಎಂದರು.
ಬಿಜೆಪಿ ಕೊಲ್ಹಾಪೂರ ಜಿಲ್ಲಾ ಅಧ್ಯಕ್ಷ ಸಮರಜೀತಸಿಂಹ ಘಾಟಗೆ ಮಾತನಾಡಿ ‘ಬೀಗ ಜಡಿಯುವ ಪರಿಸ್ಥಿತಿಯಲ್ಲಿದ್ದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಊರ್ಜಿತಾವಸ್ಥೆಗೆ ತಂದು ಕಬ್ಬು ನುರಿಸುವ ಸಾಂರ್ಥ್ಯವನ್ನು ಎರಡುಪಟ್ಟು ಮಾಡಿ ನಿತ್ಯ ೮೫೦೦ ಮೆ.ಟನ್‌ನಷ್ಟು ಬೆಳೆಸಿದರು. ಇಂತಹ ಅಸಾಧ್ಯ ಕಾರ್ಯ ಮಾತ್ರ ಓರ್ವ ಧೀಮಂತ ವ್ಯಕ್ತಿಯೇ ಮಾಡಬಲ್ಲ. ಈ ಮೊದಲು ಆಗದ, ಮುಂದೆAದೂ ಆಗದ ಇಂತಹ ಅಗಾಧ ಸಾಧನೆ ಮಾಡುವ ಮೂಲಕ ಅವರು ಈ ಭಾಗದ ರೈತರ ಹಾಗೂ ಕಾರ್ಖಾನೆಯ ನೂರಾರು ಕಾರ್ಮಿಕರ ಬಾಳಲ್ಲಿ ಬೆಳಕು ಹರಿಸಿದ್ದಾರೆ’ ಎಂದರು.
ಆರ್‌ಎಸ್‌ಎಸ್ ಸಂಘ ಪ್ರಚಾರಕ ಡಾ. ಅಜಿತ ಗೋಪಚಾಳ, ಶಾಸಕ ಪ್ರಕಾಶ ಆವಾಡೆ, ಮಹಾರಾಷ್ಟçದ ಮಾಜಿ ಶಾಸಕ ಸುರೇಶ ಹಳವನಕರ, ಉದ್ಯಮಿ ವೃಷಭ ಜೈನ, ಎಸ್.ಎಸ್. ಢವಣೆ ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಮಾಜಿ ಅಧ್ಯಕ್ಷ ಪ್ರವೀನ ಭಾಟಲೆ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜ ಪಠಾಣ, ಬಸವಪ್ರಸಾದ ಜೊಲ್ಲೆ, ಜೋತಿಪ್ರಸಾದ ಜೊಲ್ಲೆ, ಮಲಗೊಂಡಾ ಪಾಟೀಲ, ಮೊದಲಾದವರು ಸೇರಿದಂತೆ ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ: ಸುಮಾರು 25 ಸಾವಿರಕ್ಕೂ ಅಧಿಕ ಜನರು ನೆರೆದಿದ್ದ ಸಚಿವೆ ಜೊಲ್ಲೆಯವರ ಪ್ರಚಾರಸಭೆಗೂ ಮುನ್ನ ಆಶೀರ್ವಾದ ಮಂಗಲ ಕಾರ್ಯಾಲಯದಿಂದ ರ‍್ಯಾಲಿ ತೆಗೆಯಲಾಯಿತು. ಹಳೆಯ ಪಿ.ಬಿ. ರಸ್ತೆ ಮೂಲಕ ಮುನಿಸಿಪಲ್ ಪ್ರೌಢಶಾಲೆಗೆ ಬಂದು ಕೊನೆಗೊಂಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ