ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಾಸನ ಜಿಲ್ಲೆ ಹೇಮಾವತಿ ಜಲಾಶಯ ವ್ಯಾಪ್ತಿಯ ನಿರಾಶ್ರಿತರಿಗೆ ಹಕ್ಕು ಪತ್ರ ನೀಡಲು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ, ಅನುಭೋಗದಾರರ ಪೂರ್ವಿಕರ ಮಹಜರು ಮಾಡಿ, ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕಾನೂನು ತಿದ್ದುಪಡಿ ಮಾಡಿ ನ್ಯಾಯ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಪ್ರಶ್ನೆ ಕೇಳಿ ಹಾಸನ ಜಿಲ್ಲೆ ಆಲೂರು ತಾಲೂಕು ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾಗಿದ್ದರೂ ದುರಸ್ತು ಆಗದೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಹೇಮಾವತಿ ಜಲಾಶಯ ಯೋಜನೆಯಡಿ ೨೩೪ ಮುಳುಗಡೆ ಸಂತ್ರಸ್ತರಿಗೆ ಆಲೂರು ತಾಲೂಕಿನಲ್ಲಿ ಬದಲಿ ಜಮೀನು ನೀಡಲಾಗಿದೆ. ಬ್ಯಾಬಾ ಫಾರೆಸ್ಟ್ ಗ್ರಾಮದ ಸರ್ವೆ ನಂಬರ್ ೧ ರ ೧೫೦೫ ಎಕರೆ ಜಮೀನಿನಲ್ಲಿ ಏಕವ್ಯಕ್ತಿ ಕೋರಿಕೆ ಮೇರೆಗೆ ೫೮ ಜನರಿಗೆ ೨೦೭ ಎಕರೆ ೨೮ ಗುಂಟೆ ಜಮೀನು ದುರಸ್ತುಗೊಳಿಸಲಾಗಿದೆ. ಸ್ವಾಧೀನಾನುಭವದ ಆಧಾರದ ಮೇಲೆ ದುರಸ್ತು(ಮೋಜಣಿ) ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ, ಹಲವರಿಗೆ ಭೂಮಿ ಮಂಜೂರಾಗಿದ್ದರೂ ಕೂಡ, ಕೆಲವರ ಹಕ್ಕುಪತ್ರಗಳಲ್ಲಿ ನೈಜತೆ ಕೊರತೆಗಳಿವೆ. ಜಮೀನಿನ ಅನುಭೋಗದಾರರಿಗೆ ಕೊಡಲು ಅವಕಾಶ ಇಲ್ಲ, ದಾಖಲೆ ಕೊಟ್ಟರೆ ಮಂಜೂರು ಮಾಡಲಾಗುವುದು ಎಂದರು.
ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಸಂತ್ರಸ್ತರ ಹೆಸರಿನಲ್ಲಿ ಅಕ್ರಮಗಳಾಗಿವೆ, ಆ ಬಗ್ಗೆ ತನಿಖೆ ಆಗುತ್ತಿದೆ, ಮೂಲ ದಾಖಲೆಗಳು ಕಂದಾಯ ಇಲಾಖೆಯಲ್ಲಿರಬೇಕು, ದಾಖಲೆಗನ್ನು ಒದಗಿಸು ಹೊಣೆ ಕಂದಾಯ ಇಲಾಖೆಯದ್ದೇ ಆಗಿದೆ ಎಂದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, ಜಲಾಶಯ ಯೋಜನೆಗಳಿಗೆ ತಮ್ಮ ಆಸ್ತಿ-ಪಾಸ್ತಿ ಮುಳುಗಡೆಗೊಂಡು ತ್ಯಾಗ ಮಾಡಿದ ಜನರಿಗೆ ನ್ಯಾಯ ಒದಗಿಸಬೇಕು.ಇದನ್ನು ಸರಿಪಡಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿ ತ್ವರಿತವಾಗಿ ಪರಿಹಾರ ಒದಗಿಸಿ ಮಾನವೀಯತೆ ಮೆರೆಯಬೇಕು ಎಂದರು.
*ಲೋಕೋಪಯೋಗಿ 330 ಕಿರಿಯ ಇಂಜಿನಿಯರ್ ನೇಮಕ; ಅರ್ಹತಾ ಪಟ್ಟಿ ಶೀಘ್ರ ಪ್ರಕಟ*
https://pragati.taskdun.com/pwd330-junior-engineersrecruitment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ