
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಖ್ಯಾತ ಜ್ಯೋತಿಷಿ ವಿದ್ವಾನ್ ಅರುಣ ಹೆಗಡೆ ಅವರಿಗೆ ನಾಸಿಕ್ ದ ಪ್ರತಿಷ್ಠಿತ ಗೋದಾಗೌರವ ಪ್ರಶಸ್ತಿ ಲಭಿಸಿದೆ. ಇದೇ 24ರಂದು ನಾಸಿಕ್ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಆದ್ಯಾತ್ಮಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಅರುಣ ಹೆಗಡೆಯವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಶ್ರೀ ರಾಜೇ ಛತ್ರಪತಿ ಸಾಮಾಜಿಕ. ಶೈಕ್ಷಣಿಕ ಸೇವಾಭಾವಿ ಸಂಸ್ಥೆ ಪ್ರಶಸ್ತಿ ನೀಡುತ್ತಿದ್ದು, ಸಂಸ್ಥೆಯ ಅಧ್ಯಕ್ಷ ಗಣೇಶ ಭರ್ವೆ ಮಾಹಿತಿ ನೀಡಿದ್ದಾರೆ. ಸಂತ ಗಾಡಗೆ ಮಹಾರಾಜರ ಪುಣ್ಯ ಸ್ಮರಣೆಯ ದಿನ ಶ್ರೇಷ್ಠ ಸಮಾಜಸೇವಕ ದಿವಂಗತ ನಿವೃತ್ತಿರಾವ್ ದಾದಾಜಿ ಭರ್ವೆ ಅವರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ