Belagavi NewsBelgaum NewsKannada News

ವಿದ್ಯಾವತಿ ಜನವಾಡೆ ನಿಧನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಕನ್ನಡ ಸಾಹಿತ್ಯ ಪರಿಷತ್ತು ನಿಪ್ಪಾಣಿ ತಾಲೂಕಾ ಘಟಕದ ಮಾಜಿ ಅಧ್ಯಕ್ಷೆ ವಿದ್ಯಾವತಿ ಜನವಾಡೆ ನಿಧನರಾಗಿದ್ದಾರೆ.

ಕನ್ನಡಪರ ಕಾರ್ಯಕ್ರಮ, ಸಾಹಿತ್ಯ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತುಂಬಾ ಉತ್ಸುಕತೆಯಿಂದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ ಅವರು, ಸಮಾಜ ಸೇವಕರು ಕೂಡ ಆಗಿದ್ದರು. ಅತ್ಯಂತ ಸೃಜನಶೀಲ ಕ್ರೀಯಾಶೀಲ ವ್ಯಕ್ತಿತ್ವವುಳ್ಳವರಾಗಿದ್ದು, ಸದಾ ಕನ್ನಡ ಕಟ್ಟಾಳುವಾಗಿ ಗಡಿಭಾಗದಲ್ಲಿ ಸಲ್ಲಿಸಿದ ಸೇವೆ ಅಪಾರ.

ಗಡಿ ಭಾಗದ ಕನ್ನಡ ಹೋರಾಟಗಳಲ್ಲಿಯೂ ಸಹ ಸದಾ ಮುಂಚೂಣಿಯಾಗಿರುತ್ತಿದ್ದರು. ಇಂಥಹ ಕನ್ನಡ ಹೋರಾಟಗಾರರನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಇಂದು ಬಡವಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶೋಕ ವ್ಯಕ್ತಪಡಿಸಿದೆ.

Home add -Advt

Related Articles

Back to top button