Film & EntertainmentKannada NewsKarnataka NewsLatest

*ವಿಜಯಲಕ್ಷ್ಮೀ ದರ್ಶನ್ ಗೆ ಅಶ್ಲೀಲ ಕಮೆಂಟ್: ಬ್ಯಾಂಕ್ ಮ್ಯಾನೇಜರ್, ಆಡಿಟರ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾಗರಾಜ್ ತಳವಾರ್ ಹಾಗೂ ಪ್ರಶಾಂತ್ ತಳವಾರ್ ಬಂಧಿತ ಆರೋಪಿಗಳು. ಎರಡು ದಿನಗಳ ಹಿಂದಷ್ಟೇ ಪೊಲೀಸರು ಬೆಂಗಳೂರಿನ ಇಬ್ಬರನ್ನು ಬಂಧಿಸಿದ್ದರು. ಇದೀಗ ಧಾರವಾಡದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ನಾಗರಾಜ್ ತಳವಾರ್ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬ್ಯಾಂಕ್ ಮ್ಯಾನೇಜ್ ಆಗಿ ಕೆಲಸ ಮಾಡುತ್ತಿದ್ದ. ಪ್ರಶಾಂತ್ ತಳವಾರ್ ಧಾರವಾಡದಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ. ದೊಡ್ಡ ಹುದ್ದೆಯಲ್ಲಿದ್ದುಕೊಂಡೇ ಅಶ್ಲೀಲ ಕಮೆಂಟ್ ಕಳುಹಿಸುವಂತ ಮನಸ್ಥಿತಿ ಹೊಂದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ.

ವಿಜಯಲಕ್ಷ್ಮೀ ದರ್ಶನ್ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ನನ್ನು ಬಂಧಿಸಲಾಗಿತ್ತು.

Home add -Advt


Related Articles

Back to top button