
ಬಿಇಒ, ಶಿಕ್ಷಕರಿಗೂ ನೋಟಿಸ್ ಜಾರಿ
ಪ್ರಗತಿವಾಹಿನಿ ಸುದ್ದಿ: ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ಸ್ಥಾನದಲ್ಲಿದ್ದ ವಿಜಯನಗರ ಜಿಲ್ಲೆ 27 ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ ಡಿಡಿಪಿಐ ಸಸ್ಪೆಂಡ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ಸ್ಥಾನದಲ್ಲಿದ್ದ ವಿಜಯನಗರ ಜಿಲ್ಲೆ 27 ನೇ ಸ್ಥಾನಕ್ಕೆ ಕುಸಿದಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು ಪರೀಕ್ಷಾ ಅಕ್ರಮವಾಗಿರುವುದರಿಂದ ಇಷ್ಟೊಂದು ವ್ಯಾತ್ಯಾಸವಾಗಲು ಕಾರಣ ಎಂದು ಹೇಳಿದರು. ಈ ಕಾರಣಕ್ಕಾಗಿ ಡಿಡಿಪಿಐ ಅವರನ್ನು ಅಮಾನತು ಗೊಳಿಸಲು ಹಾಗೂ ಬಿಇಒ ಗಳಿಗೆ ನೋಟೀಸು ಜಾರಿಮಾಡಲು ಸೂಚಿಸಲಾಗಿದೆ ಎಂದರು.
ಶಿಕ್ಷಕರೂ ಕೂಡ ಇದಕ್ಕೆ ಕಾರಣಕರ್ತರು. ಜಿಲ್ಲಾ ಪಂಚಾಯತಿ ಸಿಇಒ ಕೂಡ ಇದಕ್ಕೆ ಜವಾಬ್ದಾರರಾಗಿರುವುದರಿಂದ ಅವರಿಗೂ ನೋಟೀಸ್ ಕೊಡುವಂತೆ ಸೂಚಿಸಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ