Kannada NewsKarnataka NewsLatest

*ಪ್ರೀತಿ-ಪ್ರೇಮದ ಹೆಸರಲ್ಲಿ ಕಾನ್ಸ್ ಟೇಬಲ್ ನಿಂದ ಯುವತಿಗೆ ಮೋಸ*

ಪ್ರಗತಿವಾಹಿನಿ ಸುದ್ದಿ; ಇದು ರಕ್ಷಕರೇ ಭಕ್ಷಕರಾದ ಕಥೆ. ಪೊಲೀಸ್ ಸಿಬ್ಬಂದಿಗಳೆ ಈ ರೀತಿ ಮಾಡಿದರೆ ರಕ್ಷಣೆ ನೀಡುವವರು ಯಾರು? ಕಾನ್ಸ್ ಟೇಬಲ್ ಓರ್ವ ಪ್ರೀತಿ, ಪ್ರೇಮದ ಹೆಸರಲ್ಲಿ ಯುವತಿಗೆ ಮೋಸ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಕಾನ್ಸ್ ಟೇಬಲ್ ವಿನಾಯಕ್ ವಿರುದ್ಧ ಯುವತಿ ವಿಜಯಪುರ ಗಾಂಧಿ ಚೌಕ್ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾನ್ಸ್ ಟೇಬಲ್ ವಿನಾಯಕ್, ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರೀತಿ-ಪ್ರೇಮದ ಹೆಸರಲ್ಲಿ ದೈಹಿಕ ಸಂಪರ್ಕವನ್ನೂ ಮಾಡಿದ್ದು, ಈಗ ಮದುವೆಗೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ.

Home add -Advt

ಕಳೆದ 20 ದಿನಗಳಿಂದ ವಿನಾಯಕ್ ಕರ್ತವ್ಯಕ್ಕೂ ಹಾಜರಾಗದೇ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.


Related Articles

Back to top button