ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಜನವರಿ 20ರಂದು ನವದೆಹಲಿಯಲ್ಲಿ ನಡೆಯಲಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಪ್ರಧನಿ ಮೋದಿ ಜತೆ ಸಂವಾದ ನಡೆಸಲು ರಾಜ್ಯದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ.
ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷಾವೂ ಪ್ರಧಾನಿ ಮೋದಿ 10ನೇ ತರಗತಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಜನವರಿ 20ರಂದು ನವದೆಹಲಿಯಲ್ಲಿ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ವಿಜಯಪುರದ ಹುಣಸ್ಯಾಳ ಆರ್ ಎಂ ಎಸ್ ಎ ಶಾಲೆಯ ವಿದ್ಯಾರ್ಥಿನಿ ಶ್ವೇತಾ ಮಲ್ಲಿಕಾರ್ಜುನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜತೆ ಸಂವಾದಾ ನಡೆಸಲಿದ್ದಾಳೆ.
ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾಗಲು ಇಂಗ್ಲೀಷ್ ಆಥವಾ ಹಿಂದಿ ಭಾಷೆಯಲ್ಲಿ ಪ್ರಬಂಧ ಮಂಡಿಸುವ ಮಾನದಂಡವನ್ನು ಇಡಲಾಗಿತ್ತು. ಅದರಂತೆ ಕರ್ನಾಟಕದಿಂದ ಒಟ್ಟು 15 ಸಾವಿರ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಿದ್ದರು. ಅವರಲ್ಲಿ ಪರೀಕ್ಷಾ ಪೇ ಚರ್ಚಾಗೆ 42 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನಿ ಜತೆ ಸಂವಾದಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿನಿ ಶ್ವೇತಾ, ಅಸ್ಪೃಶ್ಯತೆ ಕುರಿತಾಗಿ ಪ್ರಬಂಧ ಮಂಡಿಸಿದ್ದೆ. ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ನನ್ನ ಮೇಲೆ ಪರಿಣಾಮ ಬೀರಿತ್ತು. ಸಂವಿಧಾನದಲ್ಲಿ ಅವಕಾಶ ನೀಡಿದ್ದರೂ ಶಿಕ್ಷಿತರೇ ದೌರ್ಜನ್ಯ ನಡೆಸುತ್ತಿರುವುದು ಬೇಸರವನ್ನುಂಟು ಮಾಡುತ್ತದೆ. ಈ ಬಗ್ಗೆ ಬೀದಿ ನಾಟಕ, ಜನಜಾಗೃತಿ ಮುಖಾಂತರ ಪರಿವರ್ತನೆ ಸಾಧ್ಯವಿದೆ ಎಂದು ಪ್ರಬಂಧದಲ್ಲಿ ಉಲ್ಲೇಖಿಸಿದ್ದೆ. ಈಗ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಹೇಳಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ