Latest

ಮತ್ತೊಂದು ಕೇಸ್ ನಲ್ಲೂ ಜಾಮೀನು; ಮಾಜಿ ಸಚಿವ ವಿನಯ್ ಕುಲ್ಕರ್ಣಿಗೆ ಬಿಡುಗಡೆ ಭಾಗ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲ್ಕರ್ಣಿಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೀಡಾಗಿದ್ದ ವಿನಯ್ ಕುಲ್ಕರ್ಣಿಗೆ ಆ.11ರಂದು ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಸಾಕ್ಷ್ಯನಾಶ ಮಾಡಿದ ಪ್ರಕರಣ ಹಿನ್ನೆಲೆಯಲ್ಲಿ ವಿನಯ್ ಕುಲ್ಕರ್ಣಿಗೆ ಬಿಡುಗಡೆ ಭಾಗ್ಯವಿರಲಿಲ್ಲ. ಇದೀಗ ಈ ಪ್ರಕರಣದಲ್ಲೂ ಜಾಮೀನು ಮಂಜೂರಾಗಿದೆ.

ಸಾಕ್ಷ್ಯನಾಶ ಪ್ರಕರಣದಲ್ಲಿ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿನಯ್ ಕುಲ್ಕರ್ಣಿಗೆ ಜಾಮೀನು ಮಂಜೂರು ಮಾಡಿದ್ದು, ಇಂದು ಸಂಜೆ ಅಥವಾ ನಾಳೆ ವಿನಯ್ ಕುಲ್ಕರ್ಣಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬಿಡುಗಡೆಯಾದರೂ ವಿನಯ್ ಕುಲ್ಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ, ವಾರಕ್ಕೆ ಎರಡುಬಾರಿ ಸಿಬಿಐ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Home add -Advt

ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಅನುಮತಿ

Related Articles

Back to top button