Kannada NewsKarnataka News

ವಿಶ್ವ ಹಿಂದೂ ಪರಿಷತ್ – ಬಜಂಗದಳ ಹಿತ ಚಿಂತಕ ಅಭಿಯಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಹಿಂದೂ ಪರಿಷತ್ – ಬಜಂಗದಳ ಹಿತ ಚಿಂತಕ ಅಭಿಯಾನ 2019 ನವೆಂಬರ್ 17 ರಿಂದ ಡಿಸೆಂಬರ್ 1 ರವರಗೆ 15 ದಿನಗಳ ಕಾಲ ನಡೆಸಲಿದೆ.
ವಿಶ್ವ ಹಿಂದೂ ಪರಿಷತ್ತು ಸ್ಥಾಪನೆಯಾದ ಈ 55 ವರ್ಷಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಹಿಂದೂ ಸಮೂಹವು ನೆಲೆಸಿರುವ 68 ದೇಶಗಳಲ್ಲಿ ಹಬ್ಬಿಸಿದೆ. ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಶಕ್ತವಾಗಿದೆ. ಚೈತನ್ಯವನ್ನು ತುಂಬಿದೆ. ಆತ್ಮವಿಶ್ವಾಸವನ್ನು ತಂದಿದೆ. ಮಠ ಮಂದಿರಗಳ ರಕ್ಷಣೆ ಸ್ವಾಮಿಜಿಗಳ ಮುಖಾಂತರ ಜಾಗೃತಿ ಮೂಡಿಸುವುದು ಮತ್ತು ಬಜಂಗದಳ ಮತ್ತು ದುರ್ಗಾವಾಹಿನಿಗಳ  ಮೂಲಕ ರಕ್ತದಾನ, ಗೋರಕ್ಷಣೆ, ಲವ್ ಜಿಹಾದಿಯಿಂದ ರಕ್ಷಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿಯಲ್ಲಿ ಇಂದು ಹಿತ ಚಿಂತಕ ಅಭಿಯಾನ ಪ್ರಾರಂಭಿಸಲಾಗಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಹಿತ ಚಿಂತಕರನ್ನು ಮಾಡುವ ಗುರಿ ಹೊಂದಲಾಗಿದೆ.
ಪ್ರಾಂತ ಸಂಘಟನಾ ಮಂತ್ರಿ  ಮಹಾಬಲೇಶ್ವರ , ಪ್ರಾಂತ ಕೋಶಾಧ್ಯಕ್ಷ  ಕೃಷ್ಣ ಭಟ್ಟ, ಜಿಲ್ಲಾಧ್ಯಕ್ಷರು ಶ್ರೀಕಾಂತ ಕದಮ, ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ, ಬಸವರಾಜ ಹಳಂಗಳಿ , ಹೇಮಂತ ಹವಳ, ಅಜಯ ರಜಪೂತ,  ಸೋಮಶೇಖರ ಹಿರೇಮಠ, ಸತೀಶ ಮಾಳವದೆ, ಬಸವರಾಜ ಗಾಣಗಿ, ರಾಹುಲ ಬಟ್ವನಕರ್, ಗಜಾನನ ಅಷ್ಟೆಕರ, ಗಣೇಶ ಚೌಗಲೆ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button