GIT add 2024-1
Laxmi Tai add
Beereshwara 33

*ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ವಾರ್ಷಿಕ ಘಟಿಕೋತ್ಸವ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 23ನೇ ವಾರ್ಷಿಕ ಘಟಿಕೋತ್ಸವ(ಭಾಗ -2 )ನ್ನು ಗುರುವಾರ, ದಿನಾಂಕ 07ನೇ ಮಾರ್ಚ್, 2024 ರಂದು ಪೂರ್ವಾಹ್ನ 11.30 ಕ್ಕೆ ವಿ. ತಾ. ವಿ. “ಜ್ಞಾನ ಸಂಗಮ” ಆವರಣದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಗೌರವಾನ್ವಿತ ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಶ್ರೀ. ಥಾವರಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಿ ವಿ ಟಿ ಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪದವೀಧರರಿಗೆ ಸ್ವರ್ಣ ಪದಕಗಳನ್ನು ನೀಡಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು ನಮ್ಮ ರಾಷ್ಟ್ರವು ನಮಗೆ ಸಾಕಷ್ಟು ನೀಡಿದೆ, ಈಗ ನಮ್ಮ ರಾಷ್ಟ್ರಕ್ಕೆ ಏನನ್ನಾದರೂ ನೀಡುವ ಕಾಲ ಬಂದಿದೆ ಅದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಲಿಕೆಯು “ಶಾಲೆ ಅಥವಾ ಕಾಲೇಜಿಗೆ” ಸೀಮಿತವಾಗಿಲ್ಲ, ಮತ್ತು ಕಲಿಯಲು ಜೀವನವು ಒಂದು ದೊಡ್ಡ ವೇದಿಕೆಯಾಗಿದ್ದು ಅದು ಅಗಾಧವಾದ ಕಲಿಕೆಯ ಅವಕಾಶಗಳನ್ನು ಹೊಂದಿದೆ ಆದ್ದರಿಂದ ನಾವು ಯಾವುದೇ ಹಂತದಲ್ಲೂ ಕಲಿಕೆಯನ್ನು ನಿಲ್ಲಿಸಬಾರದು ಎಂದು ಅವರು ಹೇಳಿದರು. ನಾವೀನ್ಯತೆಯು ಶ್ರೇಷ್ಠ ಭವಿಷ್ಯಕ್ಕೆ ಮೆಟ್ಟಿಲಾಗಿದೆ. ಇದು ಜಾಗತಿಕವಾಗಿ ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತಕ್ಕೆ ಪರಿಹಾರವನ್ನು ನೀಡುತ್ತದೆ ಆದ್ದರಿಂದ ಪ್ರಪಂಚದಾದ್ಯಂತದ ಸರ್ಕಾರಗಳು ನಾವೀನ್ಯತೆಯನ್ನು ಉತ್ತೇಜಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿರುವುದು ಎಂದು ಅವರು ಹೇಳಿದರು. ಅಂತಿಮವಾಗಿ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಘಟಿಕೋತ್ಸವಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ರಾಮನ್ ಮ್ಯಾಗ್ಸಸ್ಸೇ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತು ಮುಖ್ಯ ಕಾರ್ಯರ್ನಿಹಣಾಧಿಕಾರಿ, ಸೆಲ್ಕೋ ಫೌಂಡೇಶನ ಹಾಗೂ ಸಹ- ಸಂಸ್ಥಾಪಕರು, ಸೆಲ್ಕೋ ಇಂಡಿಯಾದ ಡಾ. ಹರೀಶ್ ಹಂದೆ, ಇವರು ಮಾತನಾಡಿ ಇವತ್ತಿನ ಪದವಿಧರರು ರಾಷ್ಟ್ರದ ಏಳಿಗೆಗಾಗಿ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಾಷ್ಟ್ರದ ಹಿಂದುಳಿದ ಕ್ಷೇತ್ರಗಳಲ್ಲಿ ಸಾಮಾಜಿಕ ಅಧ್ಯಯನವನ್ನು ಕೈಗೊಂಡು ಅಲ್ಲಿಯ ಜನರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಬಡ ಜನರ ಏಳಿಗೆಗಾಗಿ ಮತ್ತು ಅವರ ಸರ್ವಾಂಗಿನ ಪ್ರಗತಿಗಾಗಿ ತಮ್ಮ ಜ್ಙಾನವನ್ನು ಮೀಸಲಿಡಬೇಕು ಎಂದು ತಿಳಿಸಿದರು. ಅದರಂತೆ ಇವತ್ತಿನ ಪದವಿಧರರು ತಾಂತ್ರಿಕ ಅಭಿವೃದ್ಧಿಯನ್ನು ಅಷ್ಟೇ ಗಮನದಲ್ಲಿಟ್ಟುಕೊಳ್ಳದೆ ಸಾಮಾಜಿಕ ಅಭಿವೃದ್ಧಿಯನ್ನು ಕೂಡಾ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಇದರಿಂದ ರಾಷ್ಟ್ರದ ನೈಸರ್ಗಿಕ ಸಂಪತ್ತು, ಅದರ ಸೌಂದರ್ಯ ಮತ್ತು ಸಂಸ್ಕೃತಿಕ ಪರಂಪರೆಯನ್ನು ಗಟ್ಟಿಗೊಳಿಸಬಹುದು. ಆದ್ದರಿಂದ ಯಾವಾಗ ನಾವು ಗ್ರಾಮೀಣ ಪ್ರದೇಶಗಳ ಮತ್ತು ಅಲ್ಲಿಯ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆಯೋ ಅದು ಯಾವಾಗಲೂ ಪ್ರಕೃತಿಗೆ ಪೂರಕವಾಗಿರುತ್ತದೆ. ಇವತ್ತು ಸಂಶೋಧನ ಪದವಿ ಪಡೆದವರು ಮುಂದಿನ ವರ್ಷಗಳಲ್ಲಿ ಆ ಸಂಶೋಧನೆ ಸಮಾಜಕ್ಕೆ ಪೂರಕವಾಗಿ ಅಭಿವೃದ್ದಿಯ ಪ್ರಗತಿಯಲ್ಲಿ ಅನುಷ್ಠಾನ ಕಾರ್ಯಕ್ರಮದಲ್ಲಿ ಒಂದು ಭಾಗವಾಗುವ ದಿಶೆಯಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದರು. ಹಾಗೆಯೇ ಉನ್ನತ ಶಿಕ್ಷಣದಲ್ಲಿ ನಮ್ಮ ಸಮಾಜದ ಸವಾಲುಗಳನ್ನು ಅಧ್ಯಯನ ವಸ್ತುವನ್ನಾಗಿ ಪರಿಗಣಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಹಾಗೂ ವಿ ಟಿ ಯು ಸಮ ಕುಲಾಧಿಪತಿಯಾದ ಡಾ.ಎಂ.ಸಿ.ಸುಧಾಕರ್, NIRF ಶ್ರೇಯಾಂಕದಲ್ಲಿ VTU ಅತ್ಯುತ್ತಮ ಸಾಧನೆಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನವು ಭಾರತವನ್ನು ವಿಶ್ವದ ರಾಷ್ಟ್ರಗಳ ಮುಂಚೂಣಿಗೆ ಕೊಂಡೊಯ್ಯುವ ಎರಡು ಪ್ರಮುಖ ಪರಿಕರಗಳು ಎಂದು ಹೇಳಿದರು. ಕರ್ನಾಟಕ ಸರ್ಕಾರವು ವಿಟಿಯು ಸಹಭಾಗಿತ್ವದಲ್ಲಿ ಕಲ್ಬುರ್ಗಿ, ತಳಕಲ್ ಮತ್ತು ಮೈಸೂರಿನಲ್ಲಿ ವಿಶೇಷ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಕೌಶಲ್ಯ ಆಧಾರಿತ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ನಿಮ್ಮ ವೃತ್ತಿಗೆ ಮಾತ್ರವಲ್ಲ, ನಮ್ಮ ರಾಷ್ಟ್ರದ ಬೌದ್ಧಿಕ ಸಂಪತ್ತಿಗೂ ಅಮೂಲ್ಯ ಆಸ್ತಿ. ನೀವು ಜಗತ್ತಿನ ಹಳೆಯ ನಾಗರಿಕತೆಯಿಂದ ಹುಟ್ಟಿದ ಹೊಸ ರಾಷ್ಟ್ರ/ವ್ಯವಸ್ಥೆಯ ಶಿಕ್ಷಣ ವ್ಯವಸ್ಥೆಯ ಭಾಗ ಎಂದು ಹೇಳಿದಿರು. ನಮ್ಮ ನೆಲ ಮತ್ತು ದೇಶದ ಪ್ರಜಾಸತ್ತಾತ್ಮಕ ಆದರ್ಶಗಳನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಅಂತಿಮವಾಗಿ ಅರಿಸ್ಟಾಟಲ್ ಹೇಳಿಕೆ “ಶ್ರೇಷ್ಠತೆ/ ಯಶಸ್ಸು ಎಂದಿಗೂ ಆಕಷ್ಮಿಕ ಘಟನೆಯಲ್ಲ”,ನ್ನು ಉಲ್ಲೇಖಿಸುವ ಮೂಲಕ ಯಶಸ್ಸು ಅಥವಾ ಶ್ರೇಷ್ಠತೆಯು ಒಂದು ಆಕಷ್ಮಿಕ ಘಟನೆಯಾಗದೆ ಯಾವಾಗಲೂ ಶ್ರೇಷ್ಠ ಉದ್ದೇಶ, ಪ್ರಾಮಾಣಿಕ ಪ್ರಯತ್ನ ಮತ್ತು ಭೌದ್ಧಿಕ ಶಕ್ತಿಯ ಫಲಿತಾಂಶವಾಗಿರುತ್ತದೆ ಎಂದು ಹೇಳಿದರು.

Emergency Service

ಘಟಿಕೋತ್ಸವದ ಆರಂಭದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಎಸ್. ಅವರು ಎಲ್ಲರನ್ನು ಸ್ವಾಗತಿಸಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿ ಟಿ ಯು ಅನುಷ್ಠಾನಗೊಳಿಸಲಾದ ಯೋಜೆನಗಳ ಬಗ್ಗೆ ಹಾಗೂ ವಿ ಟಿ ಯು ಇತ್ತೀಚಿನ ಸಾಧನೆಗಳ ಬಗ್ಗೆ ಹೇಳಿ ಅತಿಥಿಗಳನ್ನು ಪರಿಚಯಿಸಿದರು.

ವಿಶ್ವವಿದ್ಯಾಲಯದ ಈ 23ನೇ ವಾರ್ಷಿಕ ಘಟಿಕೋತ್ಸವದ (ಭಾಗ -2 ) ಸಮಯದಲ್ಲಿ, MBA-4514, MCA- 4024, M.Tech.-920, M. Arch.-44, M. Plan.-೨೭ ಹಾಗೂ ಸಂಶೋಧನಾ ಪದವಿಗಳಾದ ಫೀ. ಎಚ್ ಡಿ .D. 688 ., 02 ಎಂ ಎಸ್ಸಿ.(Engg) ಬೈ ರಿಸರ್ಚ್, ಮತ್ತು 02 ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಟು ರಿಸರ್ಚ್ ಪದವಿಗಳನ್ನು ನೀಡಲಾಗಿದೆ.

ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವರ್ಣ ಪದಕ ಪಡೆದ ಪದವೀಧರರನ್ನು ಹಾಗೂ ಅವರುಗಳು ಪಡೆದ ದತ್ತಿ ಬಹುಮಾನಗಳನ್ನು ವಿವರಿಸಿದರು.

ಮೌಲ್ಯಮಾಪನ ದಂಡ (ಮೇಸ್)ವನ್ನು ಹಿಡಿದ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಅವರು ಘಟಿಕೋತ್ಸವದ ಪಥಸಂಚಲನವನ್ನು ಮುನ್ನಡೆಸಿದರು.

ವಿ ಟಿ ಯು ನ ಡೀನ್ ಪ್ರೊ ಸದಾಶಿವೆಗೌಡ ಅವರು ಎಲ್ಲ ಪದವೀಧರರನ್ನು ಕುಲಾಧಿಪತಿಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿದರು, ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಶ್ರೀಮತಿ ಎಂ ಎ ಸಪ್ನಾ, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಲ ಸದಸ್ಯರು, ಪೋಷಕರು ವಿ ಟಿ ಯು ಸಿಬ್ಬಂದಿ ಹಾಜರಿದ್ದರು.

Bottom Add3
Bottom Ad 2