Latest

ವಿವೇಕ ಶಾಲೆಗಳ ವಿವಾದ: ಸಿಎಂ ಬೊಮ್ಮಾಯಿ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ 8,100 ಶಾಲಾ ಕೊಠಡಿಗಳನ್ನು ವಿವೇಕ ಯೋಜನೆಯಡಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ಈ ನಡುವೆ ವಿವೇಕ ಯೋಜನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ವಿವೇಕ ಯೋಜನೆಯಡಿಯ ಎಲ್ಲಾ ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆ ಹಾಗೂ ಶಿಕ್ಷಣದಲ್ಲಿಯೂ ಕೇಸರಿಕರಣ ಮಾಡಲಾಗುತ್ತಿದೆ ಸರ್ಕಾರದ ಈ ಯೋಜನೆ ಸರಿಯಲ್ಲ ಎಂದು ತಜ್ಞರು ಹಾಗೂ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ವಿವೇಕ ಶಾಲೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಇಂದು ಕಲಬುರ್ಗಿ ಜಿಲ್ಲೆಯ ಮಡಿವಾಳ ತಾಂಡ್ಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಲಿದ್ದಾರೆ.

ರಾಜ್ಯ ಸರ್ಕಾರಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಸರ್ಕಾರದ ಯೋಜನೆ ವಿವಾದಕ್ಕೆ ಗುರಿಯಾಗಿದ್ದು, ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಎಲ್ಲಾ ವಿಚಾರಗಳಲ್ಲೂ ಯಾಕೆ ರಾಜಕೀಯ ಮಾಡ್ತಾರೆ ಗೊತ್ತಿಲ್ಲ. ಕೇಸರಿ ಬಣ್ಣ ನಮ್ಮ ರಾಷ್ಟ್ರಧ್ವಜದಲ್ಲಿ ಇಲ್ಲವೇ? ಅನಗತ್ಯ ವಿವಾದಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿವೇಕಾನಂದರ ಹೆಸರಿನಲ್ಲಿ ವಿವೇಕ ಯೋಜನೆ ಮಾಡುತ್ತಿದ್ದೇವೆ. ’ವಿವೇಕ’ ಎಂದರೆ ಜ್ಞಾನದ ಸಂಕೇತ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಶೂಟ್ ಮಾಡ್ತೀನಿ ಎಂದಿದ್ದ BJP ಮುಖಂಡನ ಬಂಧನ

https://pragati.taskdun.com/politics/bjp-leadermanikantha-rathodarrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button