https://fb.watch/gRuLWusRYg/
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದ್ದು, ಮತದಾರರ ಮಾಹಿತಿ ಕಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಮತದಾರರ ಮಾಹಿತಿ ಕಡಿಯುವ ಕೆಲಸ ಮಾಡುತ್ತಿದೆ. ಮತದಾರರ ಮಾಹಿತಿ ಸಗ್ರಹಿಸಲು ಡಿಎಪಿ ಹೊಂಬಾಳೆ ಪ್ರೈ.ಲಿ. ಚೆಲುಮೆ ಎಂಟರ್ ಪ್ರೈಸಸ್ ಎಂಬ ಎರಡು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಈ ಕಂಪನಿಗಳು ವೋಟರ್ ಮಾಹಿತಿ ಕಳ್ಳತನಮಾಡುತ್ತಿದ್ದಾರೆ. ಈ ಅಕ್ರಮದ ಹಿಂದೆ ಸಚಿವ ಅಶ್ವತ್ಥನಾರಾಯಣ ಕೈವಾಡವಿದೆ ಎಂದು ಆರೋಪಿಸಿದರು.
ವೋಟರ್ ಡೇಟಾ ಸಂಗ್ರಹ ಮಾಡುವುದು ಅಪರಾಧ. ಬೂತ್ ಮಟ್ಟದ ಅಧಿಕಾರಿಗಳು ಡೇಟಾ ಸಂಗ್ರಹ ಮಾಡುತ್ತಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸಿಎಂ ಬೊಮ್ಮಾಯಿ ಹೊಸ ಆಟ ಆಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಬಿಜೆಪಿ ಹಿಡಿತದಲ್ಲೇ ಇದೆ. ಸಿಎಂ ಬಸವರಾಜ್ ಬೊಮ್ಮಾಯಿ , ಸಚಿವ ಅಶ್ವತ್ಥ ನಾರಾಯಣ ಅವರಿಗೂ ಈ ಎರಡೂ ಸಂಸ್ಥೆಗಳಿಗೂ ಏನು ಸಂಬಂಧ. ಅಕ್ರಮದ ಹೊಣೆ ಹೊತ್ತು ಮುಖ್ಯಮಂತ್ರಿಗಳು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬಸ್ ಅಪಘಾತಕ್ಕೆ ಮತ್ತೋರ್ವ ಯೋಧ ಸಾವು; ರಜೆ ಕಳೆಯಲೆಂದು ಬಂದು ದುರಂತ ಅಂತ್ಯ
https://pragati.taskdun.com/bmtc-busaccidentsoldier-deathbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ